ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ

KOTTUR Kere
ಕೊಟ್ಟೂರು ತಾಲೂಕು ಹನುಮನಹಳ್ಳಿ ಗ್ರಾಮದಲ್ಲಿ ಶನಿವಾರ ಪುನಶ್ಚೇತನಗೊಂಡ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಜಯನಗರ ಜಿಲ್ಲೆಯ ನಿರ್ದೇಶಕ ಸತೀಶ ಶೆಟ್ಟಿ, ಕೊಟ್ಟೂರು ಯೋಜನಾಧಿಕಾರಿ ನವೀನ್ ಕುಮಾರ್, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎನ್.ರಾಮನಗೌಡ, ಗ್ರಾಪಂ ಮಾಜಿ ಅಧ್ಯಕ್ಷೆ ಪ್ರತಿಭಾ ಬಸವರಾಜ್ ಇತರರಿದ್ದರು.
Published on

ಕೊಟ್ಟೂರು: ರೈತರ ಸರ್ವತೋಮುಖ ಅಭಿವೃದ್ಧಿಯೇ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶವಾಗಿದ್ದು, ಕೆರೆಗಳ ಹೂಳು ತೆರವು ಹಾಗೂ ಪುನಶ್ಚೇತನದಿಂದ ಅಂತರ್ಜಲ ವೃದ್ಧಿಯಾಗಿ ಕೃಷಿಗೆ ಅನುಕೂಲವಾಗಲಿದೆ ಎಂದು ಸಂಸ್ಥೆಯ ವಿಜಯನಗರ ನಿರ್ದೇಶಕ ಸತೀಶ ಶೆಟ್ಟಿ ಹೇಳಿದರು.

ಹನುಮನಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ನಮ್ಮ ಊರು, ನಮ್ಮ ಕೆರೆ ಯೋಜನೆಯಡಿ ಹೂಳು ತೆರವು ಮಾಡಿದ ಮೂರು ಎಕರೆ ವಿಸ್ತೀರ್ಣವಿರುವ ಕೆರೆಯನ್ನು ಗ್ರಾಪಂಗೆ ಶನಿವಾರ ಹಸ್ತಾಂತರಿಸಿ ಮಾತನಾಡಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 40 ವರ್ಷಗಳಿಂದ ರೈತರ ಸರ್ವಾಂಗೀಣ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಆರೋಗ್ಯ, ಶಿಕ್ಷಣ, ವ್ಯವಹಾರ ಸೇರಿದಂತೆ ಹಲವು ಕಾರ್ಯಕ್ರಮಗಳಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಇದನ್ನೂ ಓದಿ:

ಕೆರೆ ಹೂಳು ತೆರವಿಗೆ ಸಂಸ್ಥೆಯಿಂದ 6 ಲಕ್ಷ ರೂ. ಹಾಗೂ ಗ್ರಾಮಸ್ಥರ ಸಹಭಾಗಿತ್ವದ 2 ಲಕ್ಷ ರೂ. ವೆಚ್ಚವಾಗಿದೆ. ಯೋಜನೆಯಿಂದ ರಾಜ್ಯದಲ್ಲಿ ಒಟ್ಟು 489 ಕೆರೆಗಳ ಹೂಳು ತೆರವು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಯೋಜನಾಧಿಕಾರಿ ಎಚ್.ಡಿ.ನವೀನ್ ಕುಮಾರ್ ಮಾತನಾಡಿದರು. ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎನ್.ರಾಮನಗೌಡ, ಗ್ರಾಪಂ ಮಾಜಿ ಅಧ್ಯಕ್ಷೆ ಪ್ರತಿಭಾ ಬಸವರಾಜ್, ಗ್ರಾಪಂ ಸದಸ್ಯರಾದ ಭರಮನಗೌಡ, ಸಲೀಂಬಾಷಾ, ಸಂತೋಷ, ಪ್ರಮುಖರಾದ ಎಚ್.ಜಿ. ರಾಮನಗೌಡ, ಜಯಪ್ಪಸ್ವಾಮಿ, ಶ್ರೀಕ್ಷೇತ್ರ ಧರ್ಮಸ್ಥಳ ಸ್ವಸಹಾಯ ಸಂಘದ ಆಧ್ಯಕ್ಷೆ ದೇವಕ್ಕ, ಸಂಸ್ಥೆಯ ಕೃಷಿ ಮೇಲ್ವಿಚಾರಕರಾದ ಮಹಾಂತೇಶ, ಬಿ.ಟಿ.ವಲಯ ಮೇಲ್ವಿಚಾರಕ ನಾಗರಾಜ್ ಇತರರಿದ್ದರು. ಮಹಾಂತೇಶ ಸ್ವಾಗತಿಸಿದರೆ, ನಾಗರಾಜ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net