ಕೊಟ್ಟೂರು ಕೆರೆ ಸುತ್ತ 10 ಸಾವಿರ ಸಸಿ ನಾಟಿ, ತಹಸೀಲ್ದಾರ್ ಅನಿಲ್ ಕುಮಾರ್ ಮಾಹಿತಿ

230420 Kotturu Lake Surround Planting
Published on

ಕೊಟ್ಟೂರು: ಶತಮಾನದ ಇತಿಹಾಸ ಹೊಂದಿರುವ ಕೊಟ್ಟೂರು ಕೆರೆ ಸರ್ವೇ ಕಾರ್ಯ ಇನ್ನೆರಡು ದಿನಗಳಲ್ಲಿ ಮುಗಿಯಲಿದೆ. ಬಳಿಕ ಕೆರೆಯ ಸುತ್ತಲೂ 10 ಸಾವಿ ಸಸಿಗಳನ್ನು ನೆಡಲಾಗುವುದು ಎಂದು ತಹಸೀಲ್ದಾರ್ ಅನಿಲ್ ಕುಮಾರ್ ತಿಳಿಸಿದರು.

ಸಣ್ಣ ನೀರಾವರಿ, ಅರಣ್ಯ, ಕಂದಾಯ ಇಲಾಖೆ ಜಂಟಿಯಾಗಿ ಸರ್ವೇ ಕಾರ್ಯ ಹಮ್ಮಿಕೊಂಡಿದೆ. ಕೆರೆಯು 771 ಎಕರೆ ವಿಸ್ತೀರ್ಣ ಹೊಂದಿದ್ದು, ಹಲವರು ಒತ್ತು ಮಾಡಿಕೊಂಡಿದ್ದಾರೆ. ಸರ್ವೇ ವೇಳೆ ಕೆಲವರು ಆಗಮಿಸಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಒಪ್ಪಿಕೊಂಡು ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಎಂದು ಹೇಳಿರುವುದಾಗಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಕೆರೆಯ ಸಂಪೂರ್ಣ ಸರ್ವೇ ನಂತರ ಕೆರೆ ಸುತ್ತಲೂ ಅರಣ್ಯ ಇಲಾಖೆ 10 ಸಾವಿರ ಸಸಿಗಳನ್ನು ನೆಡಲಿದೆ. ಅಲ್ಲದೆ ಅವುಗಳ ಬೆಳೆಸುವ ಜವಾಬ್ದಾರಿಯನ್ನೂ ಅದೇ ಇಲಾಖೆಗೆ ವಹಿಸಲಾಗುವುದು. ಈಗಾಗಲೇ ಅರಣ್ಯ ಇಲಾಖೆ 10 ಸಾವಿರ ಸಸಿಗಳನ್ನು ಸಂಗ್ರಹಿಸಿದೆ. ಟ್ರಂಚ್ ಕಡಿದು ಸಸಿಗಳನ್ನು ನೆಡಲು ಸುಮಾರು 3.50 ರೂ.ಬೇಕಾಗುತ್ತದೆ. ಇಷ್ಟು ಹಣ ವ್ಯಯಿಸಲು ಅರಣ್ಯ ಇಲಾಖೆಯಲ್ಲಿ ಅವಕಾಶವಿಲ್ಲದ ಕಾರಣ ಪಟ್ಟಣದ ದಾನಿಗಳಿಂದ ಹಣ ಸಂಗ್ರಹಿಸುವ ಚಿಂತನೆ ಇದೆ. ಈ ಸಂಬಂಧ ಶೀಘ್ರದಲ್ಲಿಯೇ ಪಟ್ಟಣದ ವ್ಯಾಪಾರಿಗಳು ಮತ್ತು ದಾನಿಗಳ ಸಭೆ ಕರೆದು ಸಂಪನ್ಮೂಲ ಕ್ರೋಡೀಕರಣ ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net