ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜು ಪಕ್ಕದಲ್ಲಿ ಶಾಸನ ಪತ್ತೆ

Kotturu Shashana
ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಅನಾಥವಾಗಿ ಬಿದ್ದಿದ್ದ ಶಾಸನವನ್ನು ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ ಕಲ್ಮಠ ರಕ್ಷಿಸಿದ್ದಾರೆ. ಪ್ರಾಚಾರ್ಯ ಡಾ.ಎಂ.ರವಿಕುಮಾರ್, ಆಡಳಿತ ಮಂಡಳಿ ಸದಸ್ಯ ಕೋರಿ ಬಸವರಾಜ ಇತರರಿದ್ದರು.
Published on

ಕೊಟ್ಟೂರು: ಇಲ್ಲಿನ ಕೊಟ್ಟೂರೇಶ್ವರ ಕಾಲೇಜಿನ ಪಕ್ಕದಲ್ಲಿ ನೆಲದಲ್ಲಿ ಭಾಗಶಃ ಹುದುಗಿ ಹೋಗಿದ್ದ ಶಾಸನವನ್ನು ಆಡಳಿತ ಮಂಡಳಿ ಅಧ್ಯಕ್ಷ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಅವರು ಗಮನಿಸಿ ರಕ್ಷಿಸಿದ್ದಾರೆ.

ಸುಮಾರು ಐದಾರು ಅಡಿ ಎತ್ತರ ಮೂರು ಅಡಿ ಅಗಲವಿದೆ. ಮೇಲ್ಭಾಗದಲ್ಲಿ ಸೂರ್ಯಚಂದ್ರ ಚಿತ್ರವಿದ್ದು, ನಡುವೆ ಶಿವಲಿಂಗದ ಚಿತ್ರವಿದೆ. ಸ್ಪಷ್ಟವಾಗಿ ಹಳಗನ್ನಡದ ಅಕ್ಷರಗಳು ಕಾಣುತ್ತಿವೆ. ನಾಲ್ಕು ಅಡಿಗಳ ದೊಡ್ಡ ಶಾಸನ ಇದಾಗಿದ್ದು, ಬಹುಶಃ ಹೊಯ್ಸಳ ಇಲ್ಲವೆ ಚಾಲುಕ್ಯರ ಕಾಲದ ಅಪ್ರಕಟಿತ ಶಾಸನವಾಗಿರಬಹುದು ಎಂದು ಸಿದ್ದರಾಮ ಕಲ್ಮಠ ತಿಳಿಸಿದರು.

ಕಾರ್ಯಕರಮ ವೇದಿಕೆ ಪಕ್ಕದಲ್ಲಿ ನಿಲ್ಲಿಸಿ ಅಲುಗಾಡದಂತೆ ಸಿಮೆಂಟ್ ಮಾಡಿಸಿದ್ದೇವೆ. ಜಿಲ್ಲಾ ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆ ಮುಖ್ಯಸ್ಥರಾದ ಮಧುನಾಯ್ಕ ಅವರ ಗಮನಕ್ಕೆ ತರಲಾಗಿದೆ. ಅವರು ಶಾಸನದಲ್ಲಿರುವ ವಿಷಯವನ್ನು ತಿಳಿಸಿದರೆ, ಅದರಲ್ಲಿ ಇತಿಹಾಸ ಮತ್ತು ಚರಿತ್ರೆಯನ್ನು ಹೊಸಗನ್ನಡದಲ್ಲಿ ಬರೆಯಿಸಿ ಇಲ್ಲೇ ನಿಲ್ಲಿಸುತ್ತೇವೆ. ಇದರಿಂದ ವಿದ್ಯಾರ್ಥಿಗಳಿಗೆ ಇತಿಹಾಸ. ಚರಿತ್ರೆ ಅರ್ಥಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net