ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ 22.82 ಲಕ್ಷ ರೂ. ಸಂಗ್ರಹ

160222 Kotturu Temple Hundi Count
ಕೊಟ್ಟೂರಿನಲ್ಲಿ ಸೋಮವಾರ ಕೊಟ್ಟೂರೇಶ್ವರ ಸ್ವಾಮಿ ಹುಂಡಿ ಎಣಿಕೆಯಲ್ಲಿ ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ಪ್ರಕಾಶರಾವ್. ಧರ್ಮಕರ್ತ ಗಂಗಾಧರಯ್ಯ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Published on

ಕೊಟ್ಟೂರು: ಪಟ್ಟಣದ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಎಂಟು ಕಾಣಿಕೆ ಹುಂಡಿಗಳಲ್ಲಿನ ಹಣ ಎಣಿಕೆ ಮಾಡಿದ್ದು, 22.82 ಲಕ್ಷ ರೂ.ಸಂಗ್ರಹವಾಗಿದೆ.

ಜ.31ರಂದು 52.33 ಲಕ್ಷ ರೂ. ಸಂಗ್ರಹವಾಗಿತ್ತು. ಎರಡು ತಿಂಗಳಲ್ಲಿ 75.16 ಲಕ್ಷ ರೂ. ಸಂಗ್ರಹವಾಗಿದೆ ಎಂದು ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ಪ್ರಕಾಶ ರಾವ್ ತಿಳಿಸಿದರು. ಹುಂಡಿಯಲ್ಲಿ ಹಣದೊಂದಿಗೆ ಬೇಡಿಕೆಗಳನ್ನು ಈಡೇರಿಸುವಂತೆ ಬರೆದ ಚೀಟಿಗಳು ದೊರೆತಿವೆ. ಇದರಲ್ಲಿ ಮಕ್ಕಳನ್ನು ಕರುಣಿಸವಂತೆ, ಪ್ರೇಮಿಸುವ ಹುಡುಗ ಸಿಗಲೆಂದು ಸೇರಿ ಹಲವು ಪತ್ರಗಳು ಹುಂಡಿಯಲ್ಲಿ ಸೇರಿದ್ದವು. ಹುಂಡಿ ಎಣಿಕೆ ಸಂದರ್ಭ ಧರ್ಮಕರ್ತ ಗಂಗಾಧರಯ್ಯ, ಪ್ರಮುಖರಾದ ಪ್ರೇಮಾನಂದ ಗೌಡ. ನಾಗರಾಜ್ ಗೌಡ್ರ. ಬಿ.ಮಂಜಪ್ಪ. ಡಿ.ಸಂತೋಷ. ಕೊಟ್ರೇಶಪ್ಪ. ವಿರೂಪಾಕ್ಷಪ್ಪ. ಗಿರೀಶ ರೆಡ್ಡಿ, ಮಹಾದೇವ ಪ್ರೌಢಶಾಲೆ ವಿದ್ಯಾರ್ಥಿಗಳು, ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net