

ಕೊಟ್ಟೂರು: ಕೋಗಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿಯೇ ಕೋಗಳಿ ತಾಪಂ ಕ್ಷೇತ್ರ ಮುಂದುವರಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ತಹಸೀಲ್ದಾರ್ ಅಮರೇಶಗೆ ಬುಧವಾರ ಮನವಿ ಸಲ್ಲಿಸಿದರು.
ಜಿಪಂ ಮತ್ತು ತಾಪಂ ಕ್ಷೇತ್ರ ವಿಗಂಡಣೆ ಸಂದರ್ಭದಲ್ಲಿ ಕೋಗಳಿ ಜಿಪಂ ಕ್ಷೇತ್ರ ಯಥಾಸ್ಥಿತಿ ಮುಂದುವರಿಸಿದ್ದು, ಈ ಮೊದಲಿದ್ದ ತಾಪಂ ಕ್ಷೇತ್ರವನ್ನು ತೆಗೆದುಹಾಕಲಾಗಿರುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಸೀಮಾಗಡಿ ಆಯೋಗದ ನಿಯಮ ಮತ್ತು ನಿರ್ದೇಶನದಂತೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿಯೇ ತಾಪಂ ಪಂಚಾಯಿತಿಯೂ ಮುಂದುವರಿಯಬೇಕೆಂಬ ನಿಯಮವಿದ್ದರೂ, ಕೋಗಳಿ ತಾಪಂ ಕ್ಷೇತ್ರವನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಕೋಗಳಿ ಕನ್ನಡದ ಮೊದಲ ಗದ್ಯಕವಿ ಶಿವಕೊಟ್ಯಾಚಾರರ ಜನ್ಮಸ್ಥಳ ಹಾಗೂ ಹೋಬಳಿ ಕೇಂದ್ರ. ಪ್ರಾಥಮಿಕ ಆರೋಗ್ಯ ಕೇಂದ್ರ, ರೈತ ಸಂಪರ್ಕ ಕೇಂದ್ರ, ಸರ್ಕಾರಿ ಪ.ಪೂ.ಕಾಲೇಜು, ಎಣ್ಣೆಬೀಜ ಬೆಳಗಾರರ ಸಂಘ, ಪ್ರಾ.ಕೃ.ಪ.ಸಂಘ, ನಾಡ ಕಚೇರಿ ಮುಂತಾದವುಗಳನ್ನು ಹೊಂದಿದ್ದರೂ ತಾಪಂ ಕ್ಷೇತ್ರವನ್ನು ಕೈಬಿಟ್ಟಿರುವುದು ಏಕೆ?. ಮೊದಲಿನಂತೆಯೇ ತಾಪಂ ಕ್ಷೇತ್ರ ಮುಂದುವರಿಸಬೇಕು. ಇಲ್ಲದಿದ್ದರೆ ಮುಂಬರುವ ಜಿಪಂ, ತಾಪಂ ಚುನಾವಣೆ ಬಹಿಷ್ಕಾರಿಸುವುದಾಗಿ ಎಚ್ಚರಿಕೆ ನೀಡಿದರು.
ಮನವಿ ಸಲ್ಲಿಕೆ ವೇಳೆ ಪ್ರಮುಖರಾದ ಬಿ.ಎಂ. ಮರುಳಸಿದ್ದಯ್ಯ, ಎಚ್.ಎಂ. ಅಶೋಕಯ್ಯ, ಬಿ. ನೀಲಕಂಠಪ್ಪ, ಕೆ.ಎನ್. ಮಂಜುನಾಥ್ ಗೌಡ, ಎಚ್.ಎಂ. ವೀರೇಶ, ಮತ್ತೂರು ಬಸವರಾಜಪ್ಪ, ಕುಂಬಾರ ವೀರೇಶ, ಚೌಟಗಿ ಗೋಣೆಪ್ಪ, ಕಮ್ಮಾರ ಉಮೇಶ, ಕೋಡಿಹಳ್ಳಿ ರಾಮಪ್ಪ ಇತರರಿದ್ದರು.