28ಕ್ಕೆ ಕೊಟ್ಟೂರಿನ ಕೌಲ್‌ಪೇಟೆ ಬನಶಂಕರಿ ದೇವಿ ನೂತನ ರಥೋತ್ಸವ: ಭಕ್ತರಿಗಾಗಿ ಸಿದ್ಧವಾಗುತ್ತಿದೆ ಮಾದಲಿ

24012021 kOTTTUR NEW Chariot
Published on


ಕೊಟ್ಟೂರು: ಪಟ್ಟಣದ ಕೌಲ್‌ಪೇಟೆ ಬನಶಂಕರಿ ದೇವಿಗೆ 18 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣವಾದ ನೂತನ ರಥೋತ್ಸವ ಜ.28ರಂದು ನಡೆಯಲಿದೆ.

ರಥ ನಿರ್ಮಾಣದ ಪ್ರಧಾನ ಶಿಲ್ಪಿ ಮಂಜುನಾಥ ಆಚಾರಿ ಹಾಗೂ ರೇವಣಸಿದ್ಧಾಚಾರಿ ಆರು ತಿಂಗಳ ಕಾಲ ಆಸ್ಟ್ರೇಲಿಯಾ ಹೊನ್ನಿ, ಟೇಕ್, ಬೇವು, ಜಾಲಿ ಮರಗಳನ್ನು ಬಳಸಿ ರಥ ನಿರ್ಮಿಸಿದ್ದಾರೆ. ರಥ 17 ಅಡಿ ಎತ್ತರವಿದ್ದು, ಮೂರೂವಡಿ ಜಲ್ಲಿ, ಎರಡೂವರೆ ಅಡಿ ಕಳಸ ಸೇರಿ 23 ಅಡಿ ಎತ್ತರವಿದೆ. ಸುಂದರವಾದ ಮರದ ಮೂರ್ತಿಗಳನ್ನು ಕೂಡಿಸಲಾಗಿದೆ.

ಜ.28ರ ಸಂಜೆ ನೂತನ ಬನಶಂಕರಿ ರಥ ಬನಶಂಕರಿ ದೇವಸ್ಥಾನದಿಂದ ರೇಣುಕಾ ದೇವಸ್ಥಾನದವರೆಗೆ ಸಾಗಿ ಬನಶಂಕರಿ ದೇವಾಲಯಕ್ಕೆ ಮರಳಲಿದೆ. ರಥೋತ್ಸವಕ್ಕೆ ಬರುವ ಭಕ್ತರಿಗಾಗಿ ಶನಿವಾರ ಪಟ್ಟಣದ ಕೌಲ್‌ಪೇಟೆ ಭಕ್ತರು ನಾಲ್ಕು ಕ್ವಿಂಟಾಲ್ ಮಾದಲಿ ತಯಾರಿಸುವಲ್ಲಿ ನಿರತರಾಗಿದ್ದರು. ಜ.25ರಿಂದ ಎರಡು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net