ತಪ್ಪು ಮಾಡಿದವರಿಗೆ ಶಿಕ್ಷೆ ನಿಶ್ಚಿತ; ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ ಭರವಸೆ

29012023 kottur dc sp visit
Published on

ಎಸ್‌ಪಿ ಶ್ರೀಹರಿಬಾಬು ಜತೆ ನಷ್ಟದ ಪರಿಶೀಲನೆ

ಕೊಟ್ಟೂರು: ಕಾಳಾಪುರ ಘಟನೆಯಲ್ಲಿ ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ ಎಂದು ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ ಹೇಳಿದರು.

ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ, ಹಾನಿಗೊಳಗಾದ ಮನೆ, ವಾಹನಗಳನ್ನು ಪರೀಶೀಲಿಸಿ, ಜನರೊಂದಿಗೆ ಚರ್ಚಿಸಿದರು. ಗಲಾಟೆ ಸಂದರ್ಭದಲ್ಲಿ ಮೊಬೈಲ್‌ಗಳಲ್ಲಿ ದಾಖಲಾದ ದೃಶ್ಯಾವಳಿಗಳನ್ನು ಆಧರಿಸಿ ತಪ್ಪಿತಸ್ಥರನ್ನು ಬಂಧಿಸಲಾಗುವುದು. ಅವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾರೂ ಕಾನೂನುನ್ನು ಕೈಗೆ ತೆಗೆದುಕೊಳ್ಳಬಾರದು. ಯಾವುದೇ ಕಾರಣಕ್ಕೂ ಉದ್ವಿಗ್ನತೆಗೆ ಮತ್ತು ಗಾಳಿಸುದ್ದಿಗಳನ್ನು ನಂಬಬಾರದು ಎಂದು ಮನವಿ ಮಾಡಿದರು.

ಎಸ್ಪಿ ಹರಿಬಾಬು ಮಾತನಾಡಿ, ಉಜ್ಜಿನಿ ಗ್ರಾಮಕ್ಕೆ ಹೆಚ್ಚಿನ ಬಂದೋಬಸ್ತ್ ಒದಗಿಸಲಾಗಿತ್ತು. ಕಾಳಾಪುರದಲ್ಲಿ ಇದ್ದಕ್ಕಿದ್ದಂತೆ ಗಲಾಟೆ ಆರಂಭವಾಯಿತು. ಇದನ್ನು ಇಲಾಖೆ ನಿರೀಕ್ಷೆ ಮಾಡಿರಲಿಲ್ಲ. ಹಾನಿಗೊಳಗಾದ ಮನೆಗಳು, ಜಖಂಗೊಂಡ ವಾಹನಗಳು, ಮತ್ತಿತರ ನಷ್ಟದ ವರದಿಯನ್ನು ಸಿದ್ಧಪಡಿಸಿ ಎಫ್‌ಆರ್‌ಐ ದಾಖಲು ಮಾಡಲಾಗಿದೆ ಎಂದರು.

ತಹಸೀಲ್ದಾರ್ ಎಂ. ಕುಮಾರ ಸ್ವಾಮಿ, ಸರ್ಕಲ್ ಇನ್ಸಫೆಕ್ಟರ್ ಸೋಮಶೇಖರ ಕೆಂಚರೆಡ್ಡಿ, ಸಬ್ ಇನ್ಸಫೆಕ್ಟರ್ ವಿಜಯ ಕೃಷ್ಣ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಮಾಜಿ ಜಿಪಂ ಉಪಾಧ್ಯಕ್ಷ ದೊಡ್ಡರಾಮಣ್ಣ, ಉಜ್ಜಿನಿ ಲೋಕೇಶ, ಅಂಜಿನಪ್ಪ, ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net