

ಕೊಟ್ಟೂರು: ತಾಲೂಕಿನ ಕೆ.ಅಯ್ಯನಹಳ್ಳಿ ಗ್ರಾಮದಲ್ಲಿ ಭಾನುವಾರ ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳಿಬ್ಬರ ಮೇಲೆ ಬೀದಿನಾಯಿ ದಾಳಿ ಮಾಡಿ ಗಾಯಗೊಳಿಸಿದೆ.ಮೂರು ವರ್ಷದ ವೆಂಕಟೇಶ ಹಾಗೂ, ಐದು ವರ್ಷದ ಬೀರಪ್ಪ ಗಾಯಗೊಂಡಿದ್ದಾರೆ.
ಸ್ಥಳೀಯ ಹಾಗೂ ಕೊಟ್ಟೂರು ಆಸ್ಪತ್ರೆಯಲ್ಲಿ ನಾಯಿ ಕಡಿತದ ವ್ಯಾಕ್ಸಿನ್ ಇಲ್ಲದ ಕಾರಣ ತೀವ್ರಗಾಯಗೊಂಡ ವೆಂಕಟೇಶನನ್ನು ದಾವಣಗೆರೆಗೆ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಬೀರಪ್ಪನನ್ನು ಸೇರಿಸಲಾಗಿದೆ. ಮಕ್ಕಳ ಮೇಲೆ ದಾಳಿ ಮಾಡಿದ ನಾಯಿಗೆ ಹುಚ್ಚು ಹಿಡಿದಿರಬಹುದು ಎಂದು ಶಂಕಿಸಿ ಗ್ರಾಮಸ್ಥರು ನಾಯಿಯನ್ನು ಹುಡುಕಿದರೂ ಸಿಕ್ಕಿಲ್ಲ. ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಗ್ರಾಪಂ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.