ಜಂಗಮ ಜ್ಯೋತಿಗೆ ಅದ್ದೂರಿ ಸ್ವಾಗತ

080422 Ayyanahalli Jangama Jyoti Ratha
ಕೊಟ್ಟೂರಿನಿಂದ ಕೆ.ಅಯ್ಯನಹಳ್ಳಿ ಗ್ರಾಮಕ್ಕೆ ಆಗಮಿಸಿದ ಜಂಗಮ ಜ್ಯೋತಿ ರಥವನ್ನು ನುಗ್ಗೆಹಳ್ಳಿ ಮಹೇಶ್ವರ ಸ್ವಾಮಿಗಳು ಸ್ವಾಗತಿಸಿದರು.
Published on

ಕೊಟ್ಟೂರು: ಪಟ್ಟಣಕ್ಕೆ ಶುಕ್ರವಾರ ಸಂಜೆ ಆಗಮಿಸಿದ ಜಂಗಮ ಜ್ಯೋತಿ ರಥವನ್ನು ಪಟ್ಟಣದಲ್ಲಿನ ಜಂಗಮ ಸಂಘಟನೆಯ ಯುವಕರು ಬೈಕ್ ರ‌್ಯಾಲಿಯೊಂದಿಗೆ ಸ್ವಾಗತಿಸಿ ಅದ್ದೂರಿ ಮೆರವಣಿಗೆ ಮಾಡಿದರು. ರಥಯಾತ್ರೆಗೆ ಕೊಟ್ಟೂರು ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ಹಿರೇಮಠದ ಬಳಿ ಚಾನುಕೋಟಿ ಮಠಾಧ್ಯಕ್ಷ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹಾರ ಹಾಕುವ ಮೂಲಕ ಸ್ವಾಗತಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಮುದಾಯದ ಜನರು ಮೆರವಣಿಗೆ ಕೈಗೊಂಡರು. ಅಡಿಕೆ ಮಂಜುನಾಥ, ಆಟವಾಳ್ಗಿ ಬೋಜರಾಜ, ಆಟವಾಳ್ಗಿ ಚೆನ್ನಯ್ಯ, ಕೆ.ಅಯ್ಯನಹಳ್ಳಿಯ ಎ.ಎಂ.ಜಿ ಮಲ್ಲಿಕಾರ್ಜುನ, ಬಿ.ಎಂ.ಪಂಚಯ್ಯ, ಕೇದಾರನಾಥ, ಕೆ.ಎಂ.ಸತೀಶ, ಕೊಟ್ರಯ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net