ಹ್ಯಾಳ್ಯಾದಲ್ಲಿ ಚಾಲುಕ್ಯರ ಕಾಲದ ವೀರಗಲ್ಲು ಪತ್ತೆ

Kottur Veeragallu
ಹ್ಯಾಳ್ಯಾ ಗ್ರಾಮದಲ್ಲಿ ತುರುಕಾಳಗದ ವೀರಗಲ್ಲು ಪತ್ತೆ ಹಚ್ಚಿದ ಕನ್ನಡ ವಿವಿ ಸಂಶೋಧನಾರ್ಥಿ ಡಿ.ವೀರೇಶ.
Published on

ಕೊಟ್ಟೂರು: ಹ್ಯಾಳ್ಯಾ ಗ್ರಾಮದಲ್ಲಿ ಚಾಲುಕ್ಯರ ಕಾಲದ ಅಪರೂಪದ ತುರುಕಾಳಗದ ವೀರಗಲ್ಲು ಅನ್ನು ಕನ್ನಡ ವಿವಿಯ ಶಾಸನ ಶಾಸ್ತ್ರ ವಿಭಾಗದ ಸಂಶೋಧನಾರ್ಥಿ ಡಿ.ವೀರೇಶ ಪತ್ತೆ ಹಚ್ಚಿದ್ದಾರೆ.

ನೀಲಿಮಿಶ್ರಿತ ಬಳಪದ ಶಿಲೆಯ ವೀರಗಲ್ಲು 3 ಅಡಿ ಎತ್ತರ ಹಾಗೂ 1.5 ಅಡಿ ಅಗಲ ಹೊಂದಿದೆ. ಕೆಳಗಡೆ ಧನುರ್ಧಾರಿ ವೀರನೊಬ್ಬ ಹಸುಗಳ ರಕ್ಷಣೆಗಾಗಿ ಶತ್ರು ಯೋಧರೊಂದಿಗೆ ಹೋರಾಡುತ್ತಿರುವ ಚಿತ್ರವಿದೆ.

ಉಳಿದ ಅರ್ಧಭಾಗ ನೆಲದಲ್ಲಿ ಹೂತಿದೆ. ಮಧ್ಯೆ ತುರುಕಾಳಗದಲ್ಲಿ ವೀರಮರಣ ಹೊಂದಿದ ಧನುರ್ಧಾರಿ ಯೋಧನನ್ನು ಸುರಂಗನಾರೆಯರು ಹೆಗಲ ಮೇಲೆ ಕೈಹಾಕಿ ಆಕಾಶದಲ್ಲಿ ಹಾರುತ್ತಿರುವ ಚಿತ್ರವಿದೆ.

ಕೊನೆಯ ಹಂತದಲ್ಲಿ ಸ್ವರ್ಗಲೋಕದಲ್ಲಿ ವೀರ, ಶಿವಲಿಂಗ, ನಂದಿ, ಸೂರ್ಯ-ಚಂದ್ರರ ಸಂಕೇತಗಳಿವೆ. ವಾಸ್ತುಶಿಲ್ಪ ಲಕ್ಷಣದ ಆಧಾರದಂತೆ 12ನೇ ಶತಮಾನದ ಕಲ್ಯಾಣ ಚಾಲುಕ್ಯರ ಅವಧಿಯ ತುರುಕಾಳಗದಲ್ಲಿ ಮಡಿದ ಹ್ಯಾಳ್ಯಾ ಗ್ರಾಮದ ವೀರನೊಬ್ಬನ ವೀರಮರಣದ ಸ್ಮಾರಕ ಎಂದು ಡಿ.ವೀರೇಶ ತಿಳಿಸಿದರು.

ಹಿಂದೆ ದನಗಳನ್ನು ರಕ್ಷಿಸಿಕೊಳ್ಳಲು ಪ್ರಾಣವನ್ನೂ ಲೆಕ್ಕಿಸದೆ ಹೋರಾಡುತ್ತಿದ್ದರು. ಆ ಹೋರಾಟದಲ್ಲಿ ಕೆಲವರು ಗೆದ್ದು ಹಿಂತಿರುಗಿ ಬಂದರೆ ಮತ್ತೆ ಕೆಲವರು ಮರಣ ಹೊಂದುತ್ತಿದ್ದರು. ಇಂತಹ ವೀರರ ನೆನಪಿಗಾಗಿ ಈ ತುರುಕಾಳಗದ ಸ್ಮಾರಕಗಳನ್ನು ಹಾಕಿಸುತ್ತಿದ್ದರು.ಡಾ.ಡಿ.ವಿ.ಪರಮಶಿವಮೂರ್ತಿಕುಲಪತಿ, ಕನ್ನಡ ವಿಶ್ವವಿದ್ಯಾಲಯಕನ್ನಡ ವಿಶ್ವವಿದ್ಯಾಲಯ, ಹಂಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net