ಜಿಪಂ ಚುನಾವಣೆಗೆ ಪುತ್ರ ಸ್ಪರ್ಧಿಸಲ್ಲ: ಕೊಟ್ಟೂರಿನಲ್ಲಿ ಸಂಸದ ವೈ.ದೇವೇಂದ್ರಪ್ಪ ಹೇಳಿಕೆ

Y Devendrappa MP Bellary
Published on

ಕೊಟ್ಟೂರು: ಮುಂದಿನ ಜಿಪಂ, ತಾಪಂ ಚುನಾವಣೆಗೆ ನನ್ನ ಕುಟುಂಬದಿಂದ ಯಾರೂ ಸ್ಪರ್ಧಿಸುವುದಿಲ್ಲ ಎಂದು ಸಂಸದ ವೈ.ದೇವೇಂದ್ರಪ್ಪ ಹೇಳಿದರು. ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಲ್ಲೆಯ ಮತದಾರ ಪ್ರಭುಗಳು ನನ್ನನ್ನು ಲೋಕಸಭಾ ಸದಸ್ಯನನ್ನಾಗಿ ಆಯ್ಕೆ ಮಾಡಿದ್ದಾರೆ. ಅಷ್ಟು ಸಾಕು ಎಂದರು. ಉಜ್ಜಿನಿ ಜಿಪಂ ಕ್ಷೇತ್ರ ಎಸ್ಟಿ ಸಮುದಾಯಕ್ಕೆ ಮೀಸಲಿದ್ದು, ನಿಮ್ಮ ಪುತ್ರ ಸ್ಪರ್ಧಿಸುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ, ನಿಜನಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಮಗನೇ ಯಾಕೆ ನಿಲ್ಲಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿ ಸ್ಪರ್ಧಿಸಿ ಮುಖನ್ಯವಾಹಿನಿಗೆ ಬರಬೇಕು ಎಂಬುದು ನನ್ನ ಹಾಗೂ ಬಿಜೆಪಿ ಆಶಯವಾಗಿದೆ ಎಂದರು. ನನಗೆ ಈಗ ದೊರೆತ ಅವಕಾಶದಲ್ಲಿ ಶಕ್ತಿ ಮೀರಿ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುವೆ. ಮುಂದಿನ ಲೋಕಸಭೆ ಚುನಾವಣೆ ದೂರವಿದ್ದು, ಹೀಗೇಕೆ ಆ ಮಾತು. ದೇವರು ಆರೋಗ್ಯ ಚೆನ್ನಾಗಿದ್ದರೆ ಮುಂದಿನ ಮಾತು ಎಂದು ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net