ಹಳ್ಳಿ ಫೈಟ್: ಪ್ರಿಂಟಿಂಗ್ ಪ್ರೆಸ್‌ಗಳಿಗೆ ವರದಾನ, ಹಗಲು ರಾತ್ರಿ ಕೆಲಸ

21122020 Kottur GP Election Printing press
Published on

ಕೊಟ್ಟೂರು: ಗ್ರಾಪಂ ಚುನಾವಣೆಯಿಂದ ಪಟ್ಟಣದ ಮುದ್ರಣ ಅಂಗಡಿಗಳಿಗೆ ವರವಾಗಿದೆ. ಏಳು ಪ್ರಿಂಟಿಂಗ್ ಪ್ರೆಸ್ ಯಂತ್ರಗಳು ಹಗಲು ರಾತ್ರಿ ಚುನಾವಣೆ ಪ್ರಚಾರ ಪತ್ರಗಳನ್ನು ಮುದ್ರಿಸಿ ಆದಾಯ ನೋಡುತ್ತಿವೆ.

ಕರೊನಾದಿಂದ ಎಂಟು ತಿಂಗಳು ಮೂಲೆ ಸೇರಿದ್ದ ಪ್ರಿಟಿಂಗ್ ಪ್ರೆಸ್ ಯಂತ್ರಗಳು ಹಾಗೂ ಕೆಲಸಗಾರರಿಗೆ ಬಿಡವಿಲ್ಲದೆ ಕೆಲಸವಿದೆ. ಗ್ರಾಪಂ ಸ್ಪರ್ಧಾಳುಗಳು ಬೆಳಗಾಗುತ್ತಿದ್ದಂತೆ ಪಟ್ಟಣದ ಪ್ರಿಂಟಿಂಗ್ ಪ್ರೆಸ್ ಮುಂದೆ ಮಾದರಿ ಮತ ಪತ್ರಕ್ಕಾಗಿ ಕಾದು ನಿಲ್ಲುತ್ತಿದ್ದಾರೆ. ಕೂಡ್ಲಿಗಿ, ಹರಪನಹಳ್ಳಿ, ಕೊಟ್ಟೂರು ತಾಲೂಕಿನಲ್ಲಿ ಡಿ.27ರಂದು ಗ್ರಾಪಂ ಚುನಾವಣೆ ಇರುವುದರಿಂದ ಕರಪತ್ರ ಮುದ್ರಣಕ್ಕೆ ಬೇಡಿಕೆ ಹೆಚ್ಚಿದೆ.

ನಾಲ್ಕು ದಿನಗಳಿಂದ ಎಲ್ಲ ಪ್ರಿಟಿಂಗ್ ಪ್ರೆಸ್‌ಗಳು ಬಿಜಿ ಇವೆ. ಕರೊನಾದಿಂದ ನಷ್ಟಕ್ಕೆ ಒಳಗಾಗಿದ್ದ ಪ್ರೆಸ್ ಮಾಲೀಕರಿಗೆ ಗ್ರಾಪಂ ಚುನಾವಣೆ ತುಸು ಚೇರಿಕೆ ನೀಡಬಹುದು. ಆದರೆ, ಎಲ್ಲರಿಗೂ ತ್ವರಿತವಾಗಿ ಬೇಕಿರುವುದರಿಂದ ಹಗಲು ರಾತ್ರಿ ಪ್ರಿಂಟಿಂಗ್ ಮಾಡುತ್ತಿದ್ದೇವೆ. ಎಂದು ಮಾಮನಿ ಪ್ರಿಂಟಿಂಗ್ ಪ್ರೆಸ್ ಮಾಲೀಕ ಮಾಮನಿ ವೀರಭದ್ರಪ್ಪ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net