ಕೊಟ್ಟೂರಿನಲ್ಲಿ ಅಡುಗೆ ಅನಿಲ ಸೋರಿಕೆ, ಐವರಿಗೆ ಗಾಯ: ದಾವಣಗೆರೆ ಆಸ್ಪತ್ರೆಗೆ ರವಾನೆ

Kotturu Cylinder Blast
ಅಡುಗೆ ಅನಿಲ ಸೋರಿಕೆಯಿಂದ ಗಾಯಗೊಂಡ ಕರಿಬಸವರಾಜ್.
Published on

ಕೊಟ್ಟೂರು: ಪಟ್ಟಣದ ಮುದುಕನಕಟ್ಟೆ ಪ್ರದೇಶದ ಕರಿಬಸವರಾಜ್ ಎಂಬುವವರ ಮನೆಯಲ್ಲಿ ಬುಧವಾರ ರಾತ್ರಿ ಅಡುಗೆ ಅನಿಲ ಸೋರಿಕೆಯಾಗಿ ಐವರಿಗೆ ಗಾಯಗಳಾಗಿವೆ. ಸಿಲಿಂಡರ್‌ಗೆ ರೆಗ್ಯುಲೇಟರ್ ಸರಿಯಾಗಿ ಅಳವಡಿಸದ ಕಾರಣ ಹೀಗಾಗಿದ್ದು, ಮನೆ ಬಾಗಿಲು ಛಿದ್ರಗೊಂಡಿದ್ದು, ಕರಿಬಸವರಾಜ್, ಚೈತ್ರಾ, ದೇವಿರಮ್ಮ, ಸಂತೋಷ್ ಗಾಯಗೊಂಡಿದ್ದಾರೆ. ಗಾಬರಿಗೊಂಡ ಹೊರಗೆ ಬರುವಾಗ ಲತಾ ಎಂಬುವವರಿಗೆ ಪಾರ್ಶ್ವವಾಯು ಬಂದಿದೆ. ಗಾಯಗೊಂಡವರನ್ನು ದಾವಣಗೆರೆ ಆಸ್ಪತ್ರೆಗೆ ಸೇರಿಸಲಾಗಿದೆ. ಅನಿಲ ಸೋರಿಕೆ ವೇಳೆ ಬೆಂಕಿ ತಾಕದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಜರುಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net