ರೈತನ ಖಾತೆಗೆ ವಿಮೆಯ ಅರ್ಧ ಹಣ ಸಂದಾಯ

Kottur Bara
ತಿಮ್ಮಲಾಪುರದಲ್ಲಿ ರೈತ ಸಂಗಯ್ಯ ಅವರ ಹೊಲದಲ್ಲಿ ಮಳೆ ಇಲ್ಲದೆ ಒಣಗಿದ ಮೆಕ್ಕೆಜೋಳ, ರಾಗಿ ಬೆಳೆಯನ್ನು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಕರೀಗೌಡ ವೀಕ್ಷಿಸಿದರು. ಜಿಪಂ ಸಿಇಒ ಸದಾಶಿವ ಪ್ರಭು, ತಹಸೀಲ್ದಾರ್ ಅಮರೇಶ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ತಾಲೂಕು ಕೃಷಿ ಅಧಿಕಾರಿ ಶರಣಪ್ಪ, ಎಪಿಎಂಸಿ ಕಾರ್ಯದರ್ಶಿ ಎ.ಕೆ.ವೀರಣ್ಣ ಇತರರಿದ್ದರು.
Published on

ಕೊಟ್ಟೂರು: ಬೆಳೆ ವಿಮೆ ಮಾಡಿಸಿದ ಪ್ರತಿಯೊಬ್ಬ ರೈತನ ಬ್ಯಾಂಕ್ ಖಾತೆಗೆ ಪಾಲಿಸಿಯ ಅರ್ಧ ಹಣ ಸಂದಾಯವಾಗಲಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಕರಿಗೌಡ ಹೇಳಿದರು.

ತಾಲೂಕಿನ ತಿಮಲಾಪುರ ಕ್ರಾಸ್ ಹೆಲಿಪ್ಯಾಡ್ ಹತ್ತಿರ ರೈತ ಸಂಗಯ್ಯ ಅವರ ಹೊಲದಲ್ಲಿ ರಾಗಿ, ಮೆಕ್ಕೆಜೋಳ ಬೆಳೆ ಹಾನಿ ವೀಕ್ಷಿಸಿ ರೈತರೊಂದಿಗೆ ಮಾತನಾಡಿದರು. ಎಕರೆಗೆ ಎಷ್ಟು ಖರ್ಚು ಮಾಡಿರುವುದು ಸೇರಿದಂತೆ ಅಗತ್ಯ ಮಾಹಿತಿ ಪಡೆದುಕೊಂಡರು.

ಬಳಿಕ ದೊಡ್ಡ ಮನಿ ಶ್ಯಾಮಣ್ಣ ಹೊಲದಲ್ಲಿ ಮೆಕ್ಕೆಜೋಳ, ಈರುಳ್ಳಿ , ರಾಗಿ ಬೆಳೆ ಪರಿಶೀಲಿಸಿದರು. ರೈತರಿಂದ ಅಹವಾಲು ಸ್ವೀಕರಿಸಿದರು.

ಜಿಪಂ ಸಿಇಒ ಸದಾಶಿವ ಪ್ರಭು, ತಹಸೀಲ್ದಾರ್ ಅಮರೇಶ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ತಾಲೂಕು ಕೃಷಿ ಅಧಿಕಾರಿ ಶರಣಪ್ಪ, ಎಪಿಎಂಸಿ ಕಾರ್ಯದರ್ಶಿ ಎ.ಕೆ.ವೀರಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net