ತೂಕದ ಯಂತ್ರದಲ್ಲಿ ವ್ಯತ್ಯಾಸ 7 ಸಾವಿರ ರೂ. ದಂಡ - ಮಾಪನ ಶಾಸ್ತ್ರ ಇಲಾಖೆ ನಿರೀಕ್ಷಕ ಎಂ.ಬಿ.ಅಹಮ್ಮದ್ ಮಾಹಿತಿ

Published on

ಕೊಟ್ಟೂರು: ಪಟ್ಟಣದ ಎಪಿಎಂಸಿ ಆವರಣದಲ್ಲಿ ಹರಪನಹಳ್ಳಿ ಕಾನೂನು ಮಾಪನಶಾಸ್ತ್ರ ಇಲಾಖೆ ನಿರೀಕ್ಷಕ ಎಂ.ಬಿ.ಅಹಮ್ಮದ್ ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಶುಕ್ರವಾರ ಪರಿಶೀಲಿಸಿ, ನಿಖರವಿದ್ದ ಯಂತ್ರಗಳಿಗೆ ದೃಢೀಕರಣ ನೀಡಿದರು.

ಫೆ.20ರಿಂದಲೇ ತೂಕದ ಯಂತ್ರಗಳ ಪರಿಶೀಲನೆ ಕಾರ್ಯ ಆರಂಭಿಸಲಾಗಿದೆ. ಪಟ್ಟಣದಲ್ಲಿ ಒಟ್ಟು 280 ವ್ಯಾಪಾರಿಗಳಿದ್ದು, ಎಲೆಕ್ಟ್ರಾನಿಕ್ ಯಂತ್ರಗಳಲ್ಲಿ ತೂಕದ ವ್ಯತ್ಯಾಸ ಕಂಡುಬಂದಲ್ಲಿ ವ್ಯಾಪಾರಿಗೆ 2 ಸಾವಿರ ರೂ. ದಂಡ ವಿಧಿಸಲಾಗುವುದು. ಇಂತಹ ಪ್ರಕರಣಗಳಿಂದ 7 ಸಾವಿರ ರೂ. ದಂಡ ಸಂಗ್ರಹಿಸಲಾಗಿದೆ. ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ವರ್ಷಕ್ಕೊಮ್ಮೆ, ಇತರ ತೂಕದ ಯಂತ್ರಗಳನ್ನು ಎರಡು ವರ್ಷಕ್ಕೊಮ್ಮೆ ಪರಿಶೀಲಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net