

ಕೊಟ್ಟೂರು: ಗ್ರಾಮೀಣ ಭಾಗದಲ್ಲಿ ಉತ್ತಮ ಕ್ರೀಡಾಪಟುಗಳಿದ್ದು, ಅವರನ್ನು ಗುರುತಿಸಿ ತರಬೇತಿ ನೀಡಿದರೆ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರಬಲ್ಲರು ಎಂದು ಅಬಕಾರಿ ಇಲಾಖೆ ನಿವೃತ್ತ ಡಿವೈಎಸ್ಪಿ ಅರಸೀಕೆರೆ ನಂಜಪ್ಪ ಹೇಳಿದರು.
ತಾಲೂಕಿನ ಹರಾಳು ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಕೆ.ಅಯ್ಯನಹಳ್ಳಿ ವಲಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆ ಕೇವಲ ಆಟವಲ್ಲ. ದೇಹ ಮತ್ತು ಮನಸ್ಸನ್ನು ಸದೃಢಗೊಳಿಸಬಲ್ಲದು ಎಂದರು.
ಕೊಟ್ಟೂರು ವಲಯದ ಇಸಿಒ ಎಸ್.ನಿಂಗಪ್ಪ ಮಾತನಾಡಿದರು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಡಿ.ಹೇಮಪ್ಪ ಕ್ರೀಡಾ ಧ್ವಜಾರೋಹಣ ನೇರವೇರಿಸಿದರು. ವಲಯದ ಸಂಚಾಲಕರಾದ ಎಲ್.ಎಂ.ಕೊಟ್ರಮ್ಮ ಇತರರಿದ್ದರು. ಮಳೆಯಿಂದ ಚಿಕ್ಕ ಹಗರಿ ಹಳ್ಳ ತುಂಬಿದ್ದರಿಂದ ವಿದ್ಯಾರ್ಥಿಗಳು, ಶಿಕ್ಷಕರನ್ನು ದಾಟಿಸಲು ಟ್ರ್ಯಾಕ್ಟರ್ ವ್ಯವಸ್ಥೆ ಮಾಡಲಾಗಿತ್ತು.