ಶರಣರು ಸಿದ್ಧಾಂತವನ್ನು ಅಪ್ಪಿಕೊಂಡು ಮುನ್ನಡೆದವರು

Kotturu Datti Upanysa
ಕೊಟ್ಟೂರಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶರಣ ಸಾಹಿತ್ಯ ಪರಿಷತ್ ದತ್ತಿ ಕಾರ್ಯಕ್ರಮ.
Published on

ಕೊಟ್ಟೂರು: ಶರಣರ ಬದುಕು ತೆರೆದ ಪುಸ್ತಕ. ಅವರು ನುಡಿದಂತೆ ನಡೆದವರು. ಶರಣಯ್ಯ ಅವರು ತಮ್ಮ ಜೀವನದಲ್ಲಿ ಶರಣರ ಸಿದ್ಧಾಂತವನ್ನು ಅಪ್ಪಿಕೊಂಡು ಮುನ್ನಡೆದವರು ಎಂದು ಬಿಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಕೆ.ಎಂ.ಚಿದಾನಂದಯ್ಯ ಬಣ್ಣಿಸಿದರು.

ಇಲ್ಲಿನ ನಿವೃತ್ತ ನೌಕರರ ಭವನದಲ್ಲಿ ಗುರುವಾರ ಲಿಂ.ಶರಣಯ್ಯ ಹಿರೇಮಠ ದತ್ತಿ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಾ.ಕೆ.ಸಿ.ಕುಲಕರ್ಣಿ ಉಪನ್ಯಾಸ ನೀಡಿದರು. ಶಿಕ್ಷಕ ಟಿ.ಕೆ.ಸಿದ್ದರಾಮೇಶ್ವರ ಪ್ರಾಸ್ತಾವಿಕ ಮಾತನಾಡಿದರು. ಸ್ನೇಹ ಕೆ.ಎಸ್. ದತ್ತಿ ಪರಿಚಯ ಮಾಡಿದರು.

ಶಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ.ರವಿಕುಮಾರ, ಅಧ್ಯಕ್ಷ ಡಾ.ಕೆ.ರವೀಂದ್ರನಾಥ, ದೇ.ಕರಿಯಪ್ಪ. ದೇವರಮನಿ ಕೊಟ್ರೇಶ ಮಾತನಾಡಿದರು. ಶರಣಯ್ಯ ಹಿರೇಮಠ ಪತ್ನಿ ಎಂ.ಸುಜಾತಾ, ಕುಟುಂಬದವರಾದ ಅನೂಪ್ ಎಚ್.ಎಂ., ಅಜ್ಜಯ್ಯಸ್ವಾಮಿ ಎಚ್.ಎಂ., ಅನುಷಾ ಎಚ್.ಎಂ., ಶಾಂತಕುಮಾರಸ್ವಾಮಿ, ತಿಪ್ಪೇಸ್ವಾಮಿ, ತಾಲೂಕು ಕದಳಿ ಮಹಿಳಾ ವೇದಿಕೆ ಕಾರ್ಯದರ್ಶಿ ದೇವರಮನಿ ಮಂಗಳಾ, ಖಜಾಂಚಿ ಅಂಗಡಿ ಚಂದ್ರಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net