ಆಂಬುಲೆನ್ಸ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ: ಸಹಜ ಹೆರಿಗೆ ಮಾಡಿಸಿದ ಶುಶ್ರೂಷಕ, ಆಶಾ ಕಾರ್ಯಕರ್ತೆ

11042021 Kottur ambulance child birth
Published on

ಕೊಟ್ಟೂರು: ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯುವಾಗ ಮಾರ್ಗಮಧ್ಯೆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ತಾಲೂಕಿನ ಗೊಲ್ಲರಹಳ್ಳಿಯ ರಾಜೇಶ್ವರಿಗೆ ಭಾನುವಾರ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ 108ಕ್ಕೆ ಕರೆ ಮಾಡಲಾಗಿದೆ. ಆಂಬುಲೆನ್ಸ್ ಮೂಲಕ ಕೊಟ್ಟೂರಿಗೆ ಕರೆದೊಯ್ಯುತ್ತಿದ್ದಾಗ ನೋವು ಹೆಚ್ಚಾಗಿದ್ದರಿಂದ ರಸ್ತೆ ಮಧ್ಯೆ ಆಂಬುಲೆನ್ಸ್ ಶುಶ್ರೂಷಕ ಮಲ್ಲೇಶ, ಆಶಾ ಕಾರ್ಯಕರ್ತೆ ಮಧು ಸಹಾಯ ಪಡೆದು ಸಹಜ ಹೆರಿಗೆ ಮಾಡಿಸಿದ್ದಾರೆ. ಸದ್ಯ ಕೊಟ್ಟೂರು ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯೆ ರಶ್ಮಿ ರಾಕೇಶ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net