ಕೊಟ್ಟೂರಲ್ಲಿ ಸಿಡಿಲು ಬಡಿದು ವ್ಯಕ್ತಿ ಬಲಿ: ಹೊಲದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ನಡೆದ ಘಟನೆ

22102021 Kottur thunderbolt
Published on


ಕೊಟ್ಟೂರು: ತಾಲೂಕಿನ ಅಲಬೂರು ಗ್ರಾಮದಲ್ಲಿ ಗುರುವಾರ ಸಂಜೆ ಸಿಡಿಲಿಗೆ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಜತೆಯಲ್ಲಿದ್ದ ಒಂದು ಎತ್ತು ಕೂಡಾ ಸತ್ತಿದೆ. ಕಳ್ಳಿಮನಿ ಕೊಟ್ರೇಶ (55) ಮೃತ.

ಜಮೀನಿನಲ್ಲಿ ಕೃಷಿ ಕೆಲಸ ಮಾಡುವಾಗ ಸಿಡಿಲು ಬಡಿದು ಕಳ್ಳಿಮನಿ ಕೊಟ್ರೇಶಪ್ಪ ಪ್ರಜ್ಞೆ ತಪ್ಪಿದ್ದರು. ಎರಡು ಎತ್ತುಗಳಲ್ಲಿ ಒಂದು ಸ್ಥಳದಲ್ಲೇ ಸತ್ತಿದೆ. ಸಂಜೆಯಾದರೂ ಕೊಟ್ರೇಶ ಮನೆಗೆ ಬಾರದ ಕಾರಣ ಮನೆಯವರು ಜಮೀನಿಗೆ ಹೋದಾಗ ಅಸ್ವಸ್ಥರಾಗಿದ್ದ ಇವರನ್ನು ಹರಪನಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸಲಿಲ್ಲ. ಇವರಿಗೆ ಪತ್ನಿ, ಮೂವರು ಗಂಡು ಮಕ್ಕಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net