

ಕೊಟ್ಟೂರು: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅನನುಕೂಲವಿಲ್ಲದೆ ಪಾರದರ್ಶಕ ವ್ಯವಹಾರ ನಡೆಯುತ್ತದೆ. ಮಾರುಕಟ್ಟೆ ಅಭಿವೃದ್ಧಿಗೆ ಇಲಾಖೆ ಸಿದ್ಧವಾಗಿದೆ ಎಂದು ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲಾ ಕೃಷಿ ಮಾರುಕಟ್ಟೆ ಇಲಾಖೆ ಉಪ ನಿರ್ದೇಶಕ ಎಸ್. ಶ್ಯಾಮ್ ಹೇಳಿದರು.
ಇಲ್ಲಿನ ಮಾರುಕಟ್ಟೆಗೆ ಮಂಗಳವಾರ ಭೇಟಿ ನೀಡಿ ವ್ಯವಹಾರ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೃಷಿ ಕಾಯ್ದೆ ತಿದ್ದುಪಡಿಯಿಂದ ವ್ಯಾಪಾರಸ್ಥರಿಗೆ ಹೆಚ್ಚು ಅನುಕೂಲವಾಗಿದೆ. ವ್ಯಾಪಾರಸ್ಥರು ಮಾರುಕಟ್ಟೆ ಹೊರಗಡೆ ಖರೀದಿ ಮಾಡುವುದರಿಂದ ಶುಲ್ಕ ಸಂಗ್ರಹ ಪಾತಾಳಕ್ಕೆ ಕುಸಿದಿದೆ. ಕಾಯ್ದೆ ತಿದ್ದುಪಡಿ ಮೊದಲು ಮಾರುಕಟ್ಟೆ ಶುಲ್ಕ 1.50 ರೂ. ಇತ್ತು. ತಿದ್ದುಪಡಿಯಿಂದಾಗಿ ಶುಲ್ಕ 60 ಪೈಸೆಯಾಗಿದೆ. ಸಿರಗುಪ್ಪ ಮಾರುಕಟ್ಟೆ ಶುಲ್ಕ ತಿಂಗಳಿಗೆ ಕೋಟಿ ರೂ. ಬರುತ್ತಿತ್ತು. ಈಗ ಕೇವಲ 25 ಸಾವಿರ ರೂ. ಆಗಿದೆ. ಹಗರಿಬೊಮ್ಮನಹಳ್ಳಿ, ಹಡಗಲಿ, ಹರಪನಹಳ್ಳಿ, ಹೊಸಪೇಟೆ ಮಾರುಕಟ್ಟೆ ಸಮಿತಿ ಶುಲ್ಕ ತೀರ ಕಡಿಮೆಯಗಿದೆ ಎಂದರು. ಇದೇ ರೀತಿ ಸಾಗಿದರೆ ಕಷ್ಟವಾಗಲಿದೆ ಎಂದರು. ಮಾರುಕಟ್ಟೆ ಕಾರ್ಯದರ್ಶಿ ವೀರಣ್ಣ ಇದ್ದರು.