

ಕೊಟ್ಟೂರು: ತಾಲೂಕಿನ 14 ಗ್ರಾಪಂಗಳ 396 ಬೋರ್‌ವೆಲ್, ಬೀದಿ ದೀಪಗಳಿಗೆ ಜೆಸ್ಕಾಂ 18 ಕೋಟಿ ರೂ. ಬಿಲ್ ನೀಡಿದ್ದು, ಪಾವತಿಸುವುದು ಕಷ್ಟ ಎಂದು ತಾಪಂ ಅಧ್ಯಕ್ಷ ಎಸ್.ಗುರುಮೂರ್ತಿ ಮತ್ತು ಇಒ ವಿಶ್ವನಾಥ್ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಜಂಟಿಯಾಗಿ ಮಾತನಾಡಿ, ತಾಲೂಕಿನ 396 ಬೋರ್‌ವೆಲ್‌ಗಳಲ್ಲಿ 176 ಅಸ್ತಿತ್ವದಲ್ಲಿಲ್ಲ. ಹೀಗಿರುವಾಗ ಹಣ ಹೇಗೆ ಕಟ್ಟಲು ಸಾಧ್ಯ ? ಗ್ರಾಪಂಗಳಿಂದ ಹೆಚ್ಚುವರಿಯಾಗಿ ಕಟ್ಟಿಸಿಕೊಂಡಿರುವ ವಿದ್ಯುತ್ ಬಿಲ್‌ನ್ನು ಜೆಸ್ಕಾಂ ಮರು ಪಾವತಿಸಬೇಕು. ಇಲ್ಲವೇ ಅಸ್ತಿತ್ವದಲ್ಲಿಲ್ಲದ 176 ಬೋರ್‌ವೆಲ್‌ಗಳಿಗೆ ಪಾವತಿಸಿರುವ ಬಿಲ್ ಅನ್ನು ಚಾಲ್ತಿಯಲ್ಲಿರುವ ಬೋರ್‌ವೆಲ್ ಬಿಲ್‌ಗಳಿಗೆ ತುಂಬಿಕೊಳ್ಳಬೇಕು. ಎಷ್ಟು ವರ್ಷಗಳ ವಿದ್ಯುತ್ ಬಾಕಿಯಿದೆ ? ಎಷ್ಟು ಬಡ್ಡಿ ಹಾಕಲಾಗಿದೆ ಎನ್ನುವ ಕುರಿತು ಮಾಹಿತಿ ನೀಡದ ಹೊರತು ಯಾವ ಗ್ರಾಪಂನಿಂದಲೂ ಬಿಲ್ ಕಟ್ಟುವುದಿಲ್ಲ. ಈ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದರು.