ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿದ ಶಾಸಕ

MLA
ಕೊಟ್ಟೂರಿನ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸೌಹಾರ್ದ ಸಭೆಯಲ್ಲಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ ಸೋಮವಾರ ಮಾತನಾಡಿದರು. ಪ್ರಮುಖರಾದ ರಾಜೇಂದ್ರಪ್ರಸಾದ್, ಪಿ.ಎಚ್. ದೊಡ್ಡಮಾರಣ್ಣ, ವೆಂಕಟೇಶ, ಡಿ. ಮೂಗಪ್ಪ ಮತ್ತಿತರರಿದ್ದರು.
Published on

ಕೊಟ್ಟೂರು ಉಜ್ಜಿನಿ ಗ್ರಾಮದಲ್ಲಿ ಎರಡು ಶೋಷಿತ ಸಮುದಾಯದ ನಡುವೆ ಉಂಟಾಗಿದ್ದ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಲ್ಲಿ ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ ಯಶಸ್ವಿಯಾಗಿದ್ದಾರೆ.

ಕೊಟ್ಟೂರಿನ ಪ್ರವಾಸಿ ಮಂದಿರದಲ್ಲಿ ನಡೆದ ಎರಡು ಸಮುದಾಯಗಳ ಪ್ರಮುಖರ ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್, ಸಮ ಸಮಾಜ ನಿರ್ಮಾಣಕ್ಕೆ ಹೋರಾಡಿದರೆ, ಸಂಗೊಳ್ಳಿ ರಾಯಣ್ಣ ದೇಶದ ಸ್ವಾತಂತ್ರೃಕ್ಕಾಗಿ ಜೀವವನ್ನೇ ತ್ಯಾಗಮಾಡಿದವರು. ಇಬ್ಬರೂ ಶೋಷಿತ ಸಮುದಾಯದವರೆಂಬುದನ್ನು ಯಾರೂ ಮರೆಯಬಾರದು. ಅವರು ಅನುಭವಿಸಿದ ಕಷ್ಟಗಳನ್ನು ಅರಿತು ಜೀವನ ನಡೆಸಬೇಕು ಎಂದರು.

ಕೆಲ ವಿಷಗಳಿಗೆಯಲ್ಲಿ ಉಂಟಾದ ಸಮಸ್ಯೆಯನ್ನು ದೊಡ್ಡದು ಮಾಡುವುದು ಒಳ್ಳೆಯದಲ್ಲ. ಇದರಿಂದ ಸಮಾಜದ ಸ್ವಾಸ್ಥೃ ಹಾಳಾಗುತ್ತದೆ. ಆದ್ದರಿಂದ ತಾವೆಲ್ಲರೂ ಸಹೋದರರಂತೆ ಬಾಳಬೇಕೆಂದು ಶಾಸಕರು ಹೇಳಿದಾಗ, ಸಭೆ ಒಕ್ಕೊರಲಿನ ಸಮ್ಮತಿ ಸೂಚಿಸಿತು.

ಗುಡೆಕೋಟೆ, ಚಿಕ್ಕಜೋಗಿಹಳ್ಳಿ, ಉಜ್ಜಿನಿ ಇತರ ಗ್ರಾಮಗಳು ಅಭಿವೃದ್ಧಿಗೊಂಡಿಲ್ಲ. ಅವುಗಳ ಸರ್ವತೋಮುಖ ಪ್ರಗತಿಗೊಳಿಸುವುದು ನನ್ನ ಮುಂದಿನಗುರಿ. ಅದಕ್ಕೆ ನೀವೆಲ್ಲರೂ ಬೆಂಬಲಿಸಿ ಸಹಕಾರ ನೀಡಬೇಕೆಂದು ಕೋರಿದ ಅವರು, ಮುಂದೆ ಎಂದೂ ಇಂತಹ ಕಹಿ ಘಟನೆ ಸಂಭವಿಸಿದಂತೆ ಎರಡೂ ಸಮುದಾಯದ ಮುಖಂಡರು ಎಚ್ಚರವಹಿಸಬೇಕೆಂದು ಸಲಹೆ ನೀಡಿದರು.

ಸಭೆಯಲ್ಲಿ ರಾಜೇಂದ್ರ ಪ್ರಸಾದ್, ವೆಂಟಕೇಶ, ಪಿ.ಎಚ್. ದೊಡ್ಡರಾಮಣ್ಣ, ತೋಟದ ರಾಮಣ್ಣ, ಧಾರುಕೇಶ, ಮರಿಸ್ವಾಮಿ, ದುರುಗೇಶ, ತಗ್ಗಿನಕೆರೆ ಕೊಟ್ರೇಶ, ವಿ.ಲೋಕೇಶ, ಸಿದ್ದೇಶ, ಕೊಂಡ್ಲಹಳ್ಳಿ ಲೋಕಪ್ಪ, ಸಿದ್ದಲಿಂಗಪ್ಪ. ಡಿ. ಮೂಗಪ್ಪ, ಹೊಸಕೋಡಿಹಳ್ಳಿ ಭರಮಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net