ವಿಶ್ವೇಶ್ವರಯ್ಯ ನಾಡಿನ ಹೆಮ್ಮೆಯ ಇಂಜಿನಿಯರ್

150922 Kotturu Enginers Day
Published on

ಕೊಟ್ಟೂರು: ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಪಾತ್ರ ಪ್ರಮುಖ ಎಂದು ತಾಪಂ ಇಒ ಬೆಣ್ಣಿ ವಿಜಯಕುಮಾರ್ ಹೇಳಿದರು. ತಾಪಂ ಸಭಾಂಗಣದಲ್ಲಿ ಗುರುವಾರ ಅಭಿಯಂತರ ದಿನಾಚರಣೆಯಲ್ಲಿ ಸರ್ ಎಂ. ವಿಶೇಶ್ವರಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು. ಸರ್ ಎಂ.ವಿಶ್ವೇಶ್ವರಯ್ಯ ಅವರ ಬಾಲ್ಯದ ಬದುಕು ತುಂಬ ಕಷ್ಟವಾಗಿತ್ತು. ಅದರ ನಡುವೆ ಶ್ರದ್ಧೆಯಿಂದ ಶಿಕ್ಷಣ ಮುಗಿಸಿ, ಇಂಜಿನಿಯರ್ ಆಗಿ, ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದ ನಾನಾ ಕಡೆ ಅವರ ನೇತೃತ್ವದಲ್ಲಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡಿವೆ. ಇವರು ನಮ್ಮ ನಾಡಿನ ಹೆಮ್ಮೆ ಎಂದರು. ವ್ಯವಸ್ಥಾಪಕಿ ಪುಷ್ಪಾವತಿ, ತಾಪಂ ಸಿಬ್ಬಂದಿ ತಿಪ್ಪೇಸ್ವಾಮಿ, ರೂಪಾ, ಚಂದ್ರಶೇಖರ್, ಶ್ರೀಕಾಂತ, ಪ್ರಭುಕುಮಾರ್ ಉಪ್ಪಾರ್, ನೇತ್ರಾ, ಶ್ರೀಧರ, ರವಿನಾಯ್ಕ, ಮೋಹನ್, ರಾಮಮೂರ್ತಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net