ಕೊಟ್ಟೂರಲ್ಲಿ ಪೊಲೀಸ್ ಠಾಣೆ-ಸಿಪಿಐ ಕಚೇರಿ ಕಟ್ಟಡ ಕಾಮಗಾರಿ ಆರಂಭಕ್ಕೆ ಆಗ್ರಹ: ಉಪತಹಸೀಲ್ದಾರ್‌ಗೆ ಸಂಘಟನೆಗಳ ಮನವಿ

19102020 Kottur New police sation appele
Published on

ಕೊಟ್ಟೂರು: ಪಟ್ಟಣದಲ್ಲಿ ತ್ವರಿತವಾಗಿ ಪೊಲೀಸ್ ಠಾಣೆ ಹಾಗೂ ಸಿಪಿಐ ಕಚೇರಿ ನಿರ್ಮಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಜಾಂಭವ ಯುವ ಸೇನೆ ಹಾಗೂ ದಲಿತ ಸಂಘಷ ಸಮಿತಿ ಮುಖಂಡರು ಸೋಮವಾರ ಉಪತಹಸೀಲ್ದಾರ್ ಅನ್ನದಾನೇಶ್‌ಗೆ ಮನವಿ ಸಲ್ಲಿಸಿದರು.

ಕಟ್ಟಡಗಳ ನಿರ್ಮಾಣಕ್ಕೆ ಎರಡೂವರೆ ಎಕರೆ ಜಾಗ ಹಾಗೂ 1.73 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಆದರೆ, ಮೂರು ವರ್ಷವಾದರೂ ಕಾಮಗಾರಿ ಆರಂಭವಾಗದಿರುವುದು ಖಂಡನೀಯ. ಎರಡು ಸಲ ಟೆಂಡರ್ ಆದರೂ ವಿಳಂಬಕ್ಕೆ ಕಾರಣವೇನು?. ಬಂದ ಅನುದಾನ ಬೇರೆಡೆ ವರ್ಗಾವಣೆ ಮಾಡಲಾಗಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ಮುಖಂಡರು ಆರೋಪಿಸಿದರು. ಈ ಸಂಬಂಧ ಅ.23ರಂದು ಮುಷ್ಕರ ನಡೆಸಲಾಗುವುದು. ಎಸ್ಪಿ ಅವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು ಎಂದು ಒತ್ತಾಯಿಸಿದರು.

ಆನಂತರ ಸಿಪಿಐ ಎಚ್.ದೊಡ್ಡಪ್ಪ, ಪಿಎಸ್‌ಐ ನಾಗಪ್ಪಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಎಲ್.ವಿಷ್ಣು, ಪಿ.ಚಂದ್ರು, ಕೆ.ಶಿವರಾಜ್, ಬದ್ದಿ ಮಂಜುನಾಥ, ಬಂದಾತರ ಪ್ರಕಾಶ, ಕೊಟ್ರೇಶ, ಬಿ.ರೋಹಿತ್, ಅಯ್ಯನಹಳ್ಳಿ ಪ್ರಕಾಶ, ಟಿ.ಪ್ರಸಾದ್, ಎಲ್.ಮನು, ಎಲ್.ಮಹೇಶ್, ಪ್ರಸಾದ್, ಬಿ.ಹುಲುಗೇಶ, ಬಿ.ಸುದೀಪ, ಮೂಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net