ಶಿಕ್ಷಣದಿಂದ ಮಾತ್ರ ಉತ್ತಮ ಭವಿಷ್ಯ; ವಿದ್ಯಾರ್ಥಿಗಳಿಗೆ ಡಿವೈಎಸ್‌ಪಿ ಹರೀಶ ಕಿವಿಮಾತು

20072022 Kottur puc students
Published on


ಕೊಟ್ಟೂರು: ಪರೀಕ್ಷೆಯಲ್ಲಿ ಫೇಲ್ ಆದರೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ. ಬದಲಾಗಿ ಸೋಲೇ ಗೆಲುವಿನ ಮೆಟ್ಟಿಲು ಮಾಡಿಕೊಂಡು ಸಮರ್ಥವಾಗಿ ಎದುರಿಸಿದಲ್ಲಿ ಉತ್ತಮ ವಿದ್ಯಾರ್ಥಿಯಾಗಿ ರೂಪಗೊಳ್ಳಲು ಸಾಧ್ಯ ಎಂದು ಡಿವೈಎಸ್‌ಪಿ ಹರೀಶ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಭಾಗೀರಥಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದಿನ ಯುವ ಸಮೂಹ ಶಿಕ್ಷಣದ ಹಿಂದೆ ಹೋದರೆ ಮಾತ್ರ ಉತ್ತಮ ಭವಿಷ್ಯ ಮತ್ತು ವ್ಯಕ್ತಿತ್ವ ಸಂಪಾದಿಸಲು ಸಾಧ್ಯ.
ವಿದ್ಯಾರ್ಥಿಯೂ ಉನ್ನತ ಗುರಿ ಇಟ್ಟುಕೊಂಡು ಅದಕ್ಕೆ ತಕ್ಕಂತೆ ಪರಿಶ್ರಮಪಟ್ಟರೆ ಮಾತ್ರ ಅಂದುಕೊಂಡ ಕನಸು ಮತ್ತು ಗುರಿ ಎರಡನ್ನು ತಲುಪಲು ಸಾಧ್ಯ ಎಂದರು.

ಸಬ್ ಇನ್ಸೆಪೆಕ್ಟರ್ ವಿಜಯಕೃಷ್ಣ, ವಿದ್ಯಾರ್ಥಿಗಳು ಮೊಬೈಲ್ ಬಳಸುವುದರಿಂದ ನೆನಪಿನ ಶಕ್ತಿ ಕುಂದುತ್ತದೆ. ಮೇಲಾಗಿ ಶಿಕ್ಷಣದ ಕಡೆ ನಿಮ್ಮ ಆಶಕ್ತಿಯೂ ಕಡಿಯಾಗುತ್ತದೆ. ಆದ್ದರಿಂದ ಮೊಬೈಲ್‌ನಿಂದ ವಿದ್ಯಾರ್ಥಿಗಳು ದೂರವಿರಬೇಕೆಂದು ಹೇಳಿದರು.

ಪ್ರಾಚಾರ್ಯರಾದ ನಿರ್ಮಲ ಶಿವನಗುತ್ತಿ, ಗಂಗೋತ್ರಿ ಕಾಲೇಜು ಅಧ್ಯಕ್ಷ ಚಟ್ರಕಿ ಬಸವರಾಜ್, ಕಾರ್ಯದರ್ಶಿ ಸಿ.ಬಿ. ರಜತ್, ವೀಣಾ ಬಸವರಾಜ್ ಇತರರಿದ್ದರು. ಉಪನ್ಯಾಸಕರಾದ ಗುರುಸ್ವಾಮಿ, ಪ್ರಫುಲ್‌ಚಂದ್ರ, ಪೂರ್ಣಚಂದ್ರ, ಮರುಳಪ್ಪ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net