ಕೊಟ್ಟೂರಲ್ಲಿ ಬ್ಯಾನರ್‌ಗಳ ತೆರವುಗೊಳಿಸಿದ ಪಟ್ಟಣ ಪಂಚಾಯಿತಿ ಆಡಳಿತ

march 18 kottur 02
Published on

ಕೊಟ್ಟೂರು: ಪಟ್ಟಣದ ಅಂದಕ್ಕೆ ಮಾರಕವಾಗಿದ್ದ ರಾಜಕೀಯ ಪಕ್ಷಗಳ ಬ್ಯಾನರ್‌ಗಳನ್ನು ಪಟ್ಟಣ ಪಂಚಾಯಿತಿ ಆಡಳಿತ ಶನಿವಾರ ತೆರವುಗೊಳಿಸಿದೆ.

ವಿಧಾನಸಭಾ ಚುನಾವಣೆ ದೃಷ್ಟಿಯಿಂದ ವಿವಿಧ ರಾಜಕೀಯ ಪಕ್ಷದ ಸ್ಪರ್ಧಾಕಾಂಕ್ಷಿಗಳು ತಮ್ಮ ಮುಖಂಡರ ಭಾವಚಿತ್ರದೊಂದಿಗೆ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಪಟ್ಟಣದ ತುಂಬೆಲ್ಲ ಅಳವಡಿಸಿದ್ದರು. ಇದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ವಿಜಯನಗರ ಜಿಲ್ಲಾಧಿಕಾರಿಗೆ ದೂರು ನೀಡಲಾಗಿತ್ತು. ಬ್ಯಾನರ್ ತೆರವಿಗೆ ಡಿಸಿ ಆದೇಶ ನೀಡಿದ್ದರಿಂದ ಪಪಂ ಮುಖ್ಯಾಧಿಕಾರಿ ನಸುರಲ್ಲಾ ಮತ್ತು ಸಿಬ್ಬಂದಿ ಈ ಕ್ರಮ ಕೈಗೊಂಡಿದ್ದಾರೆ.

ಎಚ್ಚರಿಕೆ: ಪಟ್ಟಣದ ಎಲ್ಲೆಂದರಲ್ಲಿ ಓಡಾಡುತ್ತಿರುವ ಬಿಡಾಡಿ ದನಗಳು ಮಾಲೀಕರಿಗೆ ಪಪಂ ನೋಟೀಸ್ ನೀಡಿದೆ. ದನಗಳು ರಸ್ತೆ ನಡುವೆ ಮಲಗುತ್ತಿವೆ. ವಾಹನಗಳ ಓಡಾಡಕ್ಕೆ ತೊಂದರೆ ಮಾಡುತ್ತಿವೆ. ಅನೇಕ ಬಾರಿ ಇವುಗಳಿಂದಾಗಿ ಅಪಘಾತ ಸಂಭವಿಸಿದೆ. ಆದ್ದರಿಂದ ಸಂಬಂಧಪಟ್ಟ ಮಾಲೀಕರು ತಮ್ಮ ತಮ್ಮ ದನಗಳನ್ನು ಮನೆಯಲ್ಲಿ ಕಟ್ಟಿಕೊಳ್ಳಬೇಕು. ರಸ್ತೆಯಲ್ಲೇ ಬಿಟ್ಟರೆ ಅವುಗಳನ್ನು ಹಿಡಿದು ಬೇರೆಡೆ ಸಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net