ತಾಲೂಕಾಧ್ಯಕ್ಷರಾಗಿ ಕೊಟ್ಟೆಪ್ಪ ತಳಗೇರಿ ಆಯ್ಕೆ

25-KAMADOLLI-1
Published on

ಕುಂದಗೋಳ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಿ ಅಂಬೇಡ್ಕರ್ ಧ್ವನಿಯ ಚಂದ್ರಕಾಂತ ಎಸ್. ಕಾದ್ರೊಳ್ಳಿ ಬಣ ರಾಜ್ಯ ಸಮಿತಿಯ ಕುಂದಗೋಳ ತಾಲೂಕಾಧ್ಯಕ್ಷ ಮತ್ತು ವಿವಿಧ ಪದಾಧಿಕಾರಿಗಳ ಆಯ್ಕೆ ಸಭೆ ಇತ್ತೀಚೆಗೆ ಪಟ್ಟಣದಲ್ಲಿ ಜರುಗಿತು.

ಕುಂದಗೋಳ ತಾಲೂಕಾಧ್ಯಕ್ಷರಾಗಿ ಕೊಟ್ಟೆಪ್ಪ ತಳಗೇರಿ ಅವರನ್ನು ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳಾಗಿ ಮಂಜುನಾಥ ತಳಗೇರಿ, ಆನಂದ ಪೂಜಾರ, ಫಕೀರೇಶ ಮಾದರ, ವಿಠ್ಠಲ ಮಾದರ, ಫಕೀರೇಶ ಸಂಶಿ, ಬಸವರಾಜ ಮಾದರ, ಉಮೇಶ ಕಡೆಮನಿ ಅವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾಧ್ಯಕ್ಷ ಬಸವರಾಜ ಲಗಮ್ಮನವರ, ಗೌರವಾಧ್ಯಕ್ಷ ಬಸವರಾಜ ಮಾರಡಗಿ, ನಗರ ಘಟಕ ಅಧ್ಯಕ್ಷ ಚಂದ್ರು ದೊಡ್ಡಮನಿ, ಸುಭಾಸ ಹರಿಜನ, ನಿಂಗಪ್ಪ ವಿಠಲಾಪುರ, ಹನುಮಂತಪ್ಪ ಮೇಲಿನಮನಿ, ಬಸವರಾಜ ದೊಡ್ಡಮನಿ, ಡಾ. ವಡಕಪ್ಪ ವಡಕ್ಕನವರ, ಶರೀಫ್ ದೊಡ್ಡಮನಿ, ರಮೇಶ ಸಂಶಿ, ಗೋಪಾಲ ದೊಡ್ಡಮನಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net