

ಮಂಗಳೂರು: ಕೊಟ್ಟಾರು ಶ್ರೀ ವಿದ್ಯಾ ಸರಸ್ವತಿ ಕ್ಷೇತ್ರದ ಪರಿವಾರ ದೇವರಾದ ಶ್ರೀರಾಮದೇವರ ಸಾನಿಧ್ಯದಲ್ಲಿ ರಾಮನವಮಿ ವಿಶೇಷ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ಪಂಚಾಮೃತ ಅಭಿಷೇಕ, ರಾಮ ಅಷ್ಟೋತ್ತರ ಶತನಾಮಾವಳಿ, ಮಹಾಪೂಜೆ ನಿರವೇರಿ, ಮಧ್ಯಾಹ್ನ ಅಲಂಕಾರ ಪೂಜೆ, ಸಾಯಂಕಾಲ ಧರ್ಮರಕ್ಷಣಾ ಮೊಗವೀರ ವೇದಿಕೆಯ ಮಹಿಳೆಯರಿಂದ ಶ್ರೀರಾಮಕೀರ್ತನೆ, ರಾಮ ಅಷ್ಟೋತ್ತರ ಶತನಾಮಾವಳಿ, ಪ್ರಸನ್ನ ಪೂಜೆ, ರಂಗ ಪೂಜೆ, ಮಹಾಮಂಗಳಾರತಿ ನೆರವೇರಿ, ಅಯೋಧ್ಯ ಶ್ರೀ ರಾಮನ ಪ್ರತಿಷ್ಠಾಪನೆಯ ಪ್ರಥಮ ರಾಮನವಮಿಯ ಪರವಾಗಿ 108 ಬಾರಿ ಜೈ ಶ್ರೀ ರಾಮ್ ಘೋಷಣೆಯನ್ನು ಎಲ್ಲ ಭಕ್ತಾದಿಗಳಿಂದ ನೆರವೇರಿತು
ಪತ್ರಕರ್ತ ಅಶೋಕ್ ಎ ಸುವರ್ಣ ಮುಂಬೈ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿತ್ಯಾನಂದ ಮಲ್ಯ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಯನ ಎನ್ ಮಲ್ಯ, ಸನಾತನ ಧರ್ಮದ ನಾಯಕಿ ಆಶಾ ಜಗದೀಶ್ ಅವರನ್ನು ತುಳಸಿ ಓಂ ಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಯೋಗ ಶಿಕ್ಷಕಿ ಭಾರತೀ ಶೆಟ್ಟಿ, ರಾಮರಾವ್, ಜಯರಾಮ್ ಚಿಲಿಂಬಿ, ಚೇತನ ಶೆಟ್ಟಿ ಕೊಟ್ಟಾರ, ಚರಣ್ ಸುವರ್ಣ, ಪೂರ್ಣಿಮಾ ಕುಮಾರ್ ಈ ಸಭಾ ಕಾರ್ಯಕ್ರಮ ಇದ್ದರು. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ನವೀನ್ ಚಂದ್ರ ಶ್ರೀಯಾನ್, ಸಹ ಅರ್ಚಕ ನಿಕಿತ್ ಎನ್ ಶ್ರೀಯಾನ್ ಪೂಜಾ ವಿಧಿ ವಿಧಾನವನ್ನು ನೆರವೇರಿಸಿದರು. ಕ್ಷೇತ್ರದ ಅನುವಂಶಿಕ ಮೊಕ್ತೆಸರರು ತುಲಸಿ ಎನ್ ಶ್ರೀಯಾನ್ ಕಾರ್ಯಕ್ರಮ ನೆರವೇರಿಸಿದರು.