ಕೊಟ್ಟಮುಡಿ ರಸ್ತೆ ಮುಳುಗುವ ಆತಂಕ

18..NPK -1
ಕುಂಜಿಲ ಗ್ರಾಮದ ಖದಿಸಮ್ಮ ಎಂಬುವವರ ವಾಸದ ಮನೆ ಬೀಳುವ ಸ್ಥಿತಿಯಲ್ಲಿದೆ. ಮನೆಯಲ್ಲಿ ವಾಸ ಇರುವವರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.
Published on

ನಾಪೋಕ್ಲು: ನಾಪೋಕ್ಲು ವ್ಯಾಪ್ತಿಯಲ್ಲಿ ಗುರುವಾರ ಬಿರುಸಿನ ಮಳೆಯಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ವಿವಿಧೆಡೆ ಹಾನಿ ಸಂಭವಿಸಿದೆ.

ಸಮೀಪದ ಕೊಟ್ಟಮುಡಿ, ಬಲಮುರಿ ಎಮ್ಮೆಮಾಡು ಭಾಗಗಳಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದೆ. ಬೇತು ಗ್ರಾಮದ ಮಕ್ಕಿಕಡು ಸೇತುವೆ, ಹೊದ್ದೂರು ಗ್ರಾಮ ಪಂಚಾಯತಿಯ ಬೊಳಿಬಾಣೆ ಹಾಗೂ ಚೆರಿಯಪರಂಬು-ಕಲ್ಲು ಮೊಟ್ಟೆ, ಕಕ್ಕಬೆ-ಕುಂಜಿಲ ಪೈನರಿ ದರ್ಗಾ ರಸ್ತೆಗಳು, ನಾಪೋಕ್ಲು -ಎಡಪಾಲ ರಸ್ತೆಯ ಸೇತುವೆ ಜಲಾವೃತವಾಗಿ ಸಂಚಾರ ಸ್ಥಗಿತಗೊಂಡಿದ್ದು, ಸಾರ್ವಜನಿಕರಿಗೆ ಸಂಕಷ್ಟ ಎದುರಾಗಿದೆ.

ಬೆಳಿಗ್ಗೆಯಿಂದಲೇ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ನಾಪೋಕ್ಲು-ಬೆಟಗೇರಿ, ಮಡಿಕೇರಿ ಸಂಪರ್ಕಿಸುವ ರಸ್ತೆಯ ಕೊಟ್ಟಮುಡಿಯಲ್ಲಿ ಕಾವೇರಿ ಪ್ರವಾಹದಿಂದ ರಸ್ತೆ ಮುಳುಗಡೆಯಾಗುವ ಸಾಧ್ಯತೆ ಇದೆ. ಹೋಬಳಿ ವ್ಯಾಪ್ತಿಯಲ್ಲಿ ಗಾಳಿ, ಮಳೆಯಿಂದಾಗಿ ಹಲವು ಕಡೆ ಹಾನಿ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್ ಹಾಗೂ ಗ್ರಾಮ ಲೆಕ್ಕಿಗರು, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net