ಕೊತ್ತಲೇಶ್ವರ ಮೂರ್ತಿ ಮೆರವಣಿಗೆ

Kottaleshwara idol procession
ತುಳಸಿಗೇರಿಯಲ್ಲಿ ಕೊತ್ತಲೇಶ್ವರ ನೂತನ ಮೂರ್ತಿಯ ಮೆರವಣಿಗೆ ನಡೆಯಿತು.
Published on

ಕಲಾದಗಿ: ಸಮೀಪದ ತುಳಸಿಗೇರಿ ಗ್ರಾಮದಲ್ಲಿರುವ ಪುರಾತನ ದೇವಾಲಯದ ಕೊತ್ತಲೇಶ್ವರ ಮೂಲ ವಿಗ್ರಹ ಭಿನ್ನವಾದ ಹಿನ್ನೆಲೆಯಲ್ಲಿ ನೂತನ ಮೂರ್ತಿ ಪ್ರತಿಷ್ಠಾಪಿಸುವ ಕಾರ್ಯವನ್ನು ಗ್ರಾಮಸ್ಥರು ಆ.21 ರಂದು ಹಮ್ಮಿಕೊಂಡಿದ್ದಾರೆ.

ಕೊತ್ತಲೇಶ್ವರ ನೂತನ ಮೂರ್ತಿಯ ಭವ್ಯ ಮೆರವಣಿಗೆ ತುಳಸಿಗೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶುಕ್ರವಾರ ವಿಜೃಂಭಣೆಯಿಂದ ಜರುಗಿತು. ಶನಿವಾರ ನೂತನ ಮೂರ್ತಿಯ ಧಾನ್ಯಾದಿವಾಸ ಕಾರ್ಯಕ್ರಮ ನಡೆಯಿತು.

ಆ.20 ರಂದು ವಸಾಲಂಕಾರ ಕಾರ್ಯಕ್ರಮ ಆ.21 ರಂದು ಪ್ರತಿಷ್ಠಾಪನಾ ಹೋಮ, ನೂತನ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net