ಕೋಟಿ ಚಿತ್ರಕ್ಕೆ ಮೈಸೂರಿನಲ್ಲಿ ಉತ್ತಮ ಸ್ಪಂದನೆ

koti movie
Published on

ಮೈಸೂರು: ಡಾಲಿ ಧನಂಜಯ ನಾಯಕ ನಟನಾಗಿ ಅಭಿನಯಿಸಿರುವ ‘ಕೋಟಿ’ ಚಿತ್ರಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ನಿರ್ದೇಶಕ ಪರಮ್ ಹೇಳಿದರು.

ಈ ಸಿನಿಮಾದಲ್ಲಿ ಡಾಲಿ ಧನಂಜಯ ‘ಕೋಟಿ’ ಎಂಬ ಸಾಮಾನ್ಯ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಕುಟುಂಬ ಕೂತು ನೋಡುವಂತಹ ಚಿತ್ರ ಇದಾಗಿದೆ. ಕೋಟಿ ಸಿನಿಮಾ ಬಹುತೇಕ ಮೈಸೂರಿನಲ್ಲಿ ಚಿತ್ರೀಕರಣಗೊಂಡಿದೆ. ಸ್ಟರ್ಲಿಂಗ್ ಚಿತ್ರಮಂದಿರ, ವಿವಿ ಮೊಹಲ್ಲಾ ಮಾರುಕಟ್ಟೆ, ದೇವೇಗೌಡ ವೃತ್ತ ಸೇರಿದಂತೆ ವಿವಿಧೆಡೆ ಚಿತ್ರೀಕರಣ ಮಾಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೋಟಿ ಚಿತ್ರದ ತಾರಾಂಗಣದಲ್ಲಿ ಡಾಲಿ ಧನಂಜಯ ಜತೆಗೆ ನಾಯಕ ನಟಿಯಾಗಿ ಮೋಕ್ಷಾ ಕುಶಾಲ್, ಖಳನಾಯಕನಾಗಿ ರಮೇಶ್ ಇಂದಿರಾ ನಟಿಸಿದ್ದಾರೆ. ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ನಟಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳು ಇದ್ದು, ವಾಸುಕಿ ವೈಭವ್ ರಾಗ ಸಂಯೋಜಿಸಿದ್ದಾರೆ. ಯೋಗರಾಜ್ ಭಟ್ ಹಾಗೂ ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರಾದ ರಮೇಶ್ ಇಂದಿರಾ, ಮೋಕ್ಷಾ ಕುಶಾಲ್, ತನುಜಾ, ಪೃಥ್ವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net