ಕೋಟಿಲಿಂಗೇಶ್ವರ ರಥೋತ್ಸವ ಅದ್ದೂರಿ

1212
Published on

ಬೇತಮಂಗಲ : ಕೋಟಿಲಿಂಗೇಶ್ವರ ದೇವಾಲಕ್ಕೆ ಬುಧವಾರ ಭಕ್ತ ಸಾಗರವೇ ಹರಿದು ಬಂದಿತ್ತು. ಶ್ರೀ ಕ್ಷೇತ್ರದ 108 ಅಡಿ ಎತ್ತರದ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ, 11 ಗಂಟೆಗೆ ಅದ್ದೂರಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ದೇವಾಲಯ ಆಡಳಿತಾಧಿಕಾರಿ ಕೆ.ವಿ.ಕುಮಾರಿ ನಿರ್ದೇಶನದಲ್ಲಿ ಭಕ್ತರಿಗೆ ತೊಂದರೆಯಾಗದಂತೆ ಅಗತ್ಯ ಸೌಕರ್ಯ ಕಲ್ಪಿಸಲಾಗಿತ್ತು. ಅಹಿತಕರ ಟನೆಗಳು ಜರುಗದಂತೆ ಉರುಗಂ ಪೊಲೀಸ್​ ಠಾಣೆ ಇನ್​ಸ್ಪೆಕ್ಟರ್​ ಮಾಕೋರ್ಂಡಪ್ಪ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿ ಬಂದೋಬಸ್ತ್​ ಕಲ್ಪಿಸಿದ್ದರು.

ಇನ್ನು ಶ್ರೀಕ್ಷೇತ್ರದ ಜಾತ್ರೆ ನಿಮಿತ್ತ ಆವರಣದಲ್ಲಿ ಪೂಜಾ ಸಾಮಗ್ರಿ, ಸಿಹಿ, ಖಾರ, ಕಡ್ಲೇಪುರಿ, ಮಕ್ಕಳ ಆಟಿಕೆ ಸಾಮಾನು, ಗೃಹೋಪಯೋಗಿ ವಸ್ತುಗಳು ಸೇರಿ ನೂರಾರು ಮಳಿಗೆಗಳು ತಲೆ ಎತ್ತಿದ್ದವು.

ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ, ವಕೀಲ ರುಪತಿ ವಿಶೇಷ ಪೂಜೆ ಏರ್ಪಡಿಸಿದ್ದರು.

ದೇವರಿಗೆ ವಿಶೇಷ ಪೂಜೆ, ಅಭಿಷೇಕದ ಬಳಿಕ ಭಕ್ತರಿಗೆ ಪೊಂಗಲ ಮತ್ತು ಲಾಡು ಪ್ರಸಾದ ವಿನಿಯೋಗಿಸಲಾಯಿತು. ಶಾಸಕಿ ರೂಪಕಲಾ, ಡಿಸಿಸಿ ಬ್ಯಾಂಕ್​ ಮಾಜಿ ಅಧ್ಯಕ್ಷ ಗೋವಿಂದಗೌಡ, ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​, ಬಾಬು ಮೌನಿ ಸೇರಿ ಹಲವು ಗಣ್ಯರು ದೇವರ ದರ್ಶನ ಪಡೆದರು. ಕೋಟಿಲಿಂಗೇಶ್ವರ ಅಲ್ಲದೇ ಕೆಜಿಎ್​ ತಾಲೂಕು ವ್ಯಾಪ್ತಿಯ ಬಂಗಾರು ತಿರುಪತಿ ವೆಂಕಟರಮಣ ದೇವಸ್ಥಾನ ಸೇರಿ ವಿವಿಧ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅಲಂಕಾರ ಸೇರಿ ಹಲವು ಧಾರ್ಮಿಕ ಕೈಂಕರ್ಯಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net