

ಗುಳೇದಗುಡ್ಡ: ತಾಲೂಕಿನ ಕೋಟಿಕಲ್ಲ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಪಾರ್ವತಿ ಹು. ಮೇಟಿ ಹಾಗೂ ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಜಾಲಿಹಾಳ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಆನಂದ ಗೌಡರ ಕಾರ್ಯ ನಿರ್ವಹಿಸಿದರು. ಒಟ್ಟು 14 ಸದಸ್ಯರಲ್ಲಿ ಒಬ್ಬರು ಗೈರಾಗಿದ್ದರು. ಶ್ರುತಿ ಪತ್ತಾರ, ಯಲ್ಲವ್ವ ಹಾದಿಮನಿ, ಹುಚ್ಚೇಶ ಪೂಜಾರ, ಸಂಗವ್ವ ಕುಂದರಗಿ, ಹನುಮಂತ ಕಡ್ಲಿಮಟ್ಟಿ, ಮೈಲಾರಲಿಂಗ ಆಲೂರ, ಮಾಲಿಂಗವ್ವ ಯಮ್ಮಿ, ಶೋಭಾ ವಾಲೀಕಾರ, ಕಾಶೀನಾಥ ಪುರಾಣಿಕಮಠ, ದಾರಾಸಿಂಗ ರಾಠೋಡ, ಭುವನೇಶ್ವರಿ ಶಡ್ಲಿಗೇರಿ ಇದ್ದರು.
ಗ್ರಾಪಂ ಪಿಡಿಒ ಲಕ್ಷ್ಮಣ ಶಾಂತಗೇರಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಇತರರಿದ್ದರು.