ಬೈಕ್​ನಿಂದ ಬಿದ್ದು ಸವಾರ ಸಾವು

Bike Accident_2
Published on

ರಾಣೆಬೆನ್ನೂರ: ಬೈಕ್​ ನಿಯಂತ್ರಣ ತಪ್ಪಿ ಬಿದ್ದು ಸವಾರ ಮೃತಪಟ್ಟ ಘಟನೆ ತಾಲೂಕಿನ ಕೋಟಿಹಾಳ ಗ್ರಾಮದ ಬಳಿ ಸೋಮವಾರ ನಡೆದಿದೆ.

ತುಮಕೂರ ತಾಲೂಕಿನ ಕೆಂಚಲು ಗ್ರಾಮದ ಕುಮಾರಸ್ವಾಮಿ ವಿರುಪಾಕ್ಷಯ್ಯ (58) ಮೃತ ಬೈಕ್​ ಸವಾರ.

ಈತ ತಾಲೂಕಿನ ಹೊಳೇಆನ್ವೇರಿ ಕಡೆಯಿಂದ ಉಕ್ಕಡಗಾತ್ರಿಗೆ ತೆರಳುತ್ತಿದ್ದ ಮಾರ್ಗ ಮಧ್ಯೆ ಬೈಕ್​ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net