ಬ್ರಾಹ್ಮಣ ಸಮಾಜದಿಂದ ಕೋಟಿ ಶ್ರೀರಾಮನಾಮ ಪಾರಾಯಣ

13 LXR-1
Published on

ಲಕ್ಷ್ಮೇಶ್ವರ: ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ತಾಲೂಕು ಬ್ರಾಹ್ಮಣ ಸಮಾಜದಿಂದ ಕೋಟಿ ರಾಮ ನಾಮ ಜಪ ಪಾರಾಯಣ ಕೈಗೊಳ್ಳಲಾಗಿದೆ. ನಿತ್ಯ ಮನೆಯಲ್ಲಿ ರಾಮನಾಮ ಜಪ ಮಾಡುತ್ತಿದ್ದು, ಶನಿವಾರ, ಭಾನುವಾರ ಶ್ರೀಶಂಕರ ಭಾರತಿಮಠದಲ್ಲಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಪುರುಷರು ಸೇರಿ ಸಾಮೂಹಿಕ ರಾಮನಾಮ ಜಪ ಮಾಡುತ್ತಿದ್ದಾರೆ. 1 ಕೋಟಿ ಜಪ ಸಂಕಲ್ಪವನ್ನು ಈಡೇರಿಸುವ ಕಾರ್ಯದಲ್ಲಿ ಸಮಾಜದವರು ಪಾಲ್ಗೊಂಡಿದ್ದಾರೆ.

‘ಜ.12ರಿಂದ ಪ್ರತಿ ಮನೆಯಲ್ಲಿ ವೈಯಕ್ತಿಕ ಮತ್ತು ಸಾಮೂಹಿಕ ರಾಮನಾಮ ಜಪ ಪಾರಾಯಣ ಕೈಗೊಳ್ಳಲಾಗಿದೆ. ಜ.22ರಂದು ಶಂಕರ ಭಾರತಿಮಠದಲ್ಲಿ ರಾಮತಾರಕ ಯಜ್ಞದ ಮೂಲಕ ರಾಮನಾಮ ಜಪವನ್ನು ಶ್ರೀರಾಮನಿಗೆ ಸಮರ್ಪಣೆ ಮಾಡಲಿದ್ದು, ಎಲ್ಲ ಸಮಾಜದವರು ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳುತ್ತಿದ್ದಾರೆ’ ಎಂದು ಬ್ರಾಹ್ಮಣ ಸಮಾಜದ ತಾಲೂಕಾಧ್ಯಕ್ಷ ಕೃಷ್ಣ ಕುಲಕರ್ಣಿ ತಿಳಿಸಿದ್ದಾರೆ.

ಶಂಕರಸೇವಾ ಸಮಿತಿ ಅಧ್ಯಕ್ಷ ವಿ.ಎಲ್. ಪೂಜಾರ, ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್, ಬ್ರಾಹ್ಮಣ ಸಮಾಜದ ತಾಲೂಕಾಧ್ಯಕ್ಷ ಕೃಷ್ಣ ಕುಲಕರ್ಣಿ, ಎಸ್.ಜಿ. ಹೊಂಬಳ, ವೇ.ಮೂ. ಬಾಲಚಂದ್ರಶಾಸ್ತ್ರೀ ಹುಲಮನಿ, ನಾರಾಯಣಭಟ್ ಪುರಾಣಿಕ, ಕೆ.ಎಸ್. ಕುಲಕರ್ಣಿ ಧ್ರುವರಾಜ ಬೆಟಗೇರಿ, ಶಂಕರ ಬೆಟಗೇರಿ, ಆರ್.ಎನ್. ಪಂಚಬಾವಿ, ಬಿ.ಕೆ. ಕುಲಕರ್ಣಿ, ಎ.ಪಿ. ಕುಲಕರ್ಣಿ, ಗುರುರಾಜ ಪಾಟೀಲಕುಲಕರ್ಣಿ, ಅರವಿಂದ ದೇಶಪಾಂಡೆ, ಡಾ. ಪ್ರಸನ್ನ ಕುಲಕರ್ಣಿ, ಕೃಷ್ಣಕುಮಾರ ಕುಲಕರ್ಣಿ, ಅನೂಜಾ ಪೂಜಾರ, ಶಾಲಿನಿ ಬೆಟಗೇರಿ, ಸಾವಿತ್ರಿ ದೇಶಪಾಂಡೆ, ಮೀನಾಕ್ಷಿ ಸರದೇಶಪಾಂಡೆ, ವೀಣಾ ಪಡ್ನೀಸ್, ಮೇಘಾ ಸಾಹುಕಾರ, ಗಿರಿಜಾಬಾಯಿ ಕುಲಕರ್ಣಿ, ಕಮಲಾಬಾಯಿ ಪುರಾಣಿಕ, ಗೀತಾಬಾಯಿ ದೇಶಪಾಂಡೆ, ರಾಧಾ ಕುಲಕರ್ಣಿ, ಅಕ್ಷತಾ ಕುಲಕರ್ಣಿ, ಸೀಮಂತಿನಿ ಕುಲಕರ್ಣಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net