

ಕುಂದಾಪುರ : ರಾಜ್ಯ ಸರ್ಕಾರದ ಅದೇಶದಂತೆ ಶುಕ್ರವಾರ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಕೋಟಿಕಂಠ ಗಾಯನ ಕಾರ್ಯಕ್ರಮದಲ್ಲಿ ೨೦ ವಿದ್ಯಾರ್ಥಿಗಳು ಕುಸಿದು ಬಿದ್ದು, ಗಾಯನ ಅರ್ಧಕ್ಕೆ ಮೊಟಕುಗೊಳಿಸಲಾಯಿತು.
ಬೆಳಗ್ಗೆ ೧೧ಕ್ಕೆಆರಂಭವಾದ ಗಾಯನ ಕಾರ್ಯಕ್ರಮದಲ್ಲಿ ೫ ಸಾವಿರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಲೊಂಡಿದ್ದು, ಬಿಸಲ ತಾಪಕ್ಕೆ ಗಾಯನ ಅರಂಭವಾದ ಮೊದಲ ಗೀತೆವಗಾಯನದಲ್ಲಿಯೇ ಕುಸಿದಿ ಬೀಳುವು ಪ್ರಕ್ರಿಯೆ ಆರಂಭವಾಯಿತು.
ಸಾಮೂಹಿಕ ಸನ್ನಿಯ ಹಾಗೆ ಒಬ್ಬರ ಬೆನ್ನಿಗೆ ಮತ್ತೊಬ್ಬರಂತೆ ವಿದ್ಯಾರ್ಥಿನಿಯರು ಕುಸಿದ ಬಿದ್ದಿದ್ದು, ಅಂಬೂಲೆನ್ಸ್, ಎಸಿ ಹಾಗೂ ಡಿಎಸ್ಪಿ ವಾಹದಲ್ಲಿ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಅದರಲ್ಲಿ ಇಬ್ಬರು ವಿದ್ಯಾರ್ಥಿನಿಯರು ತೀವ್ರ ಉಸಿರಾಟ, ಆಕ್ಷಿಜನ್ ರಕ್ತದೊತ್ತಡ ಕಡಿಮೆಯಾಗಿದ್ದು ಆತಂಕಕ್ಕೆ ಕಾರಣವಾಯಿತು. ವಿದ್ಯಾರ್ಥಿನಿಯರು ಕುಸಿದು ಬೀಳುತ್ತಿದ್ದ ನಿಮಿತ್ತ ಗಾಯನ ಅರ್ಧಕ್ಕೆ ನಿಲ್ಲಿಸಲಾಯಿತು