ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ

pppppppppp
Published on



ಮಂಗಳೂರು : ನಗರದ ವಾಮಂಜೂರಿನಲ್ಲಿರುವ ಶ್ರೀ ಅಮೃತೇಶ್ವರ ಶಾಲೆಯಲ್ಲಿ ಪುತ್ತಿಗೆ ಮಠದ ಶ್ರೀ ಸುಗಣೇಂದ್ರತೀರ್ಥ ಸ್ವಾಮೀಜಿ ಅವರು ಸಂಕಲ್ಪಿಸಿರುವ ಕೋಟಿಗೀತಾ ಲೇಖನ ಯಜ್ಞ ದೀಕ್ಷೆಯನ್ನು 250ಕ್ಕೂ ಅಧಿಕ ಮಕ್ಕಳು ಹಾಗೂ ಶಿಕ್ಷಕ ವೃಂದವರು ಪಡೆದುಕೊಂಡರು.ಪುತ್ತಿಗೆ ಮಠದ ವತಿಯಿಂದ ಅನಂತ ಕೃಷ್ಣಪ್ರಸಾದ್ ಮತ್ತು ವಿಕ್ರಂ ಕುಂಟಾರ್ ಮಕ್ಕಳಿಗೆ ಮಠದ ಇತಿಹಾಸ ಹಾಗೂ ಮಕ್ಕಳಿಗೆ ಭಗವದ್ಗೀತೆ ಬರೆಯುವ ಬಗ್ಗೆ ತಿಳಿಸಿದರು. ಸುಲತಾ ಶೆಟ್ಟಿ ಅವರು ಮಕ್ಕಳಿಗೆ ಗೀತೆಯ ಶ್ಲೋಕಗಳನ್ನು ತಿಳಿಸಿದರು. ಶಾಲಾ ಸಂಸ್ಥಾಪಕ ಸೀತಾರಾಮ ಶೆಟ್ಟಿ , ಡಾ. ಸತ್ಯಾ ಶೆಟ್ಟಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net