ಕೋಟಿ ಚೆನ್ನಯ್ಯ ಸೌಹಾರ್ದ ಸಹಕಾರ ಸಂಘ ಮಹಾಸಭೆ

kota
Published on

ಕೋಟ: ಗ್ರಾಮೀಣ ಜನರ ಆರ್ಥಿಕ ಕೊಂಡಿಯಾಗಿ ಸಹಕಾರಿ ಸಂಗಳು ಕಾರ್ಯನಿರ್ವಹಿಸುತ್ತಿದ್ದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಕೋಟದ ಕೋಟಿ ಚೆನ್ನಯ್ಯ ಸೌಹಾರ್ದ ಸಹಕಾರಿ ಸಂ ಅಧ್ಯಕ್ಷ ಸಿದ್ಧಿ ಶ್ರೀನಿವಾಸ ಪೂಜಾರಿ ಹೇಳಿದರು.

ಕೋಟದ ವಾಸುದೇವ ಮಂಟಪದಲ್ಲಿ ಕೋಟಿ ಚೆನ್ನಯ್ಯ ಸೌಹಾರ್ದ ಸಹಕಾರಿ ಸಂದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಪೂಜಾರಿ ವಾರ್ಷಿಕ ವರದಿ, ಜವಾಖರ್ಚು ಸೇರಿದಂತೆ ವಿವಿಧ ವರದಿ ಮಂಡಿಸಿದರು.

ಭರತನಾಟ್ಯ ಕಲಾವಿದೆ ದಿಕ್ಷಾ.ವಿ ಬ್ರಹ್ಮಾವರ ಹಾಗೂ ಪಂಚವರ್ಣ ಸಂಘಟನೆಯನ್ನು ಗೌರವಿಸಲಾಯಿತು. ಸಂದ ಉಪಾಧ್ಯಕ್ಷೆ ಸರೋಜ ಮನೋಹರ್ ಪೂಜಾರಿ, ನಿರ್ದೇಶಕರಾದ ವಾಧವ ಪೂಜಾರಿ, ನಾಗೇಶ್ ಪೂಜಾರಿ, ಸಂತೋಷ್ ಸುವರ್ಣ, ಪುಷ್ಪಾ ಹಂದಟ್ಟು, ಅಶೋಕ್ ಪೂಜಾರಿ, ಕೋಟಿ ಪೂಜಾರಿ ವಡ್ಡರ್ಸೆ, ಜಯಂತಿ ಪೂಜಾರಿ, ನವೀನ್ ಪೂಜಾರಿ, ಸಂ ಸಿಬ್ಬಂದಿ ಮನೋಜ್ ಪೂಜಾರಿ ಉಪಸ್ಥಿತರಿದ್ದರು. ಸುಜಾತಾ ಬಾಯರಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net