ನಗರದಲ್ಲಿ ಕೊಠಾರೋತ್ಸವದ ಸಂಭ್ರಮ: ಸಂಕ್ರಾಂತಿ ಹಬ್ಬಕ್ಕೆ ವಸಂತರಾಗ ಮಹೋತ್ಸವ

Kotharotsavam at Lakshmijanardhana Temple mandya
Published on

ಮಂಡ್ಯ: ನಗರದ ಲಕ್ಷ್ಮೀ ಜನಾರ್ದನಸ್ವಾಮಿ ದೇವಾಲಯದಲ್ಲಿ ಶನಿವಾರ ಕೊಠಾರೋತ್ಸವ ಸಂಭ್ರಮ-ಸಡಗರದಿಂದ ನಡೆಯಿತು.

ಕಳೆದ ಒಂಬತ್ತು ದಿನದಿಂದ ನಿತ್ಯ ದೇವಾಲಯದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಅಲಂಕೃತಗೊಂಡ ದೇವರಿಗೆ ಅಭಿಷೇಕ, ಪುಷ್ಪ ಕೈಂಕರ‌್ಯ ಸೇವೆ, ಸಂಕ್ರಾಂತಿ ಫಲಪಠಣ, ವಸಂತರಾಗ ನೆರವೇರಿತು. ಜ.15ರಂದು ಮಕರಸಂಕ್ರಾಂತಿ ಅಂಗವಾಗಿ ರಾಮಾನುಜರ ಸಮೇತ ಶ್ರೀದೇವಿ, ಭೂದೇವಿ ಸಮೇತನಾದ ಲಕ್ಷ್ಮೀ ಜನಾರ್ದನಸ್ವಾಮಿಗೆ ವಿಶೇಷ ಅಭಿಷೇಕ, ವೇದ, ಮಂತ್ರಗಳೊಂದಿಗೆ ನಡೆಯಲಿದೆ. ಬಳಿಕ ಸಂಜೆ 5 ಗಂಟೆಯ ವೇಳೆ ಪುಷ್ಪಕೈಂಕರ‌್ಯ ಸೇವೆ ಕೊಠಾರ ಮಂಟಪದಲ್ಲಿ ಸಂಕ್ರಾಂತಿ ಫಲದ ಪಠಣ ನಡೆಯಲಿದೆ. ರಾತ್ರಿ ಮೂಲಮೂರ್ತಿಗೆ ವಸಂತರಾಗ ಮಹೋತ್ಸವ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net