ಕೋಟೆಕಣಿ ಶ್ರೀಕೃಷ್ಣ ಜಯಂತ್ಯುತ್ಸವ : ಕೃಷ್ಣವೇಷ ಸ್ಪರ್ಧೆಯಲ್ಲಿ ಸಂಭ್ರಮಿಸಿದ ಪುಟಾಣಿಗಳು

New Project (13)
Published on

ಕಾಸರಗೋಡು: ನಗರದ ಕೋಟೆಕಣಿ ಶ್ರೀರಾಮನಾಥ ಸಾಂಸ್ಕೃತಿಕ ಭವನ ಸಮಿತಿ ವತಿಯಿಂದ 23ನೇ ವರ್ಷದ ಶ್ರೀಕೃಷ್ಣ ಜಯಂತ್ಯುತ್ಸವ ಹಾಗೂ 14ನೇ ವರ್ಷದ ಶ್ರೀಕೃಷ್ಣ ವೇಷ ಸ್ಪರ್ಧೆ ಭಾನುವಾರ ಕೋಟೆಕಣಿ ಶ್ರೀರಾಮನಾಥ ಸಾಂಸ್ಕೃತಿಕ ಭವನದಲ್ಲಿ ಜರುಗಿತು.

ಬೆಳಗ್ಗೆ ಮುಂಡೋಡು ತಂತ್ರಿವರ್ಯ ಗಣೇಶ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು. ಈ ಸಂದರ್ಭ ಕಂದಕೃಷ್ಣ, ಮುದ್ದು ಕೃಷ್ಣ, ಬಾಲಕೃಷ್ಣ, ಶ್ರೀಕೃಷ್ಣ, ರಾಧೆ, ಯಶೋದಾಕೃಷ್ಣ, ರಾಧಾ ಮತ್ತು ಕೃಷ್ಣ ಹಾಗೂ ಗೀತೋಪದೇಶ(ಕೃಷ್ಣ- ಅರ್ಜುನ) ಒಳಗೊಂಡ ಸ್ಪರ್ಧೆಗಳು ಜರುಗಿದವು.

ಸಭಾ ಕಾರ್ಯಕ್ರಮದಲ್ಲಿ ಅಷ್ಟಮಿ ಸಮಿತಿ ಅಧ್ಯಕ್ಷ ಮಹಾಲಿಂಗ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವೈದ್ಯ ಬಿ.ನಾರಾಯಣ ಬಹುಮಾನ ವಿತರಿಸಿದರು. ವಿಹಿಂಪ ಜಿಲ್ಲಾ ಕಾರ್ಯದರ್ಶಿ ಗಣೇಶ್ ಮಾವಿನಕಟ್ಟೆ ಉಪಸ್ಥಿತರಿದ್ದರು. ಜಗದೀಶ್ ಕೂಡ್ಲು ಸ್ವಾಗತಿಸಿದರು. ಶಿಲ್ಪಾವರಪ್ರಸಾದ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net