

ಮೂಡುಬಿದಿರೆ: ಕೋಟೆಬಾಗಿಲು ಶ್ರೀ ವೀರಮಾರುತಿ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವ ಎಡಪದವು ಮುರಳೀಧರ ತಂತ್ರಿ ನೇತೃತ್ವದಲ್ಲಿ ಸೋಮವಾರ ನಡೆಯಿತು.
ಬೆಳಗ್ಗೆ ದೇವರಿಗೆ ಬ್ರಹ್ಮಕಲಶ ಪೂಜೆ ಪರಿಕಲಶ ಅಭಿಷೇಕ, ನಂತರ ಮಹಾಗಣತಿ, ದುರ್ಗಾಪರಮೇಶ್ವರಿ ಹಾಗೂ ವೀರಮಾರುತಿ ದೇವರಿಗೆ ಬ್ರಹ್ಮಕಲಶಾಭಿಷೇಕ ನೆರವೇರಿತು. ಬಳಿಕ ಅವಭೃತ ಬಲಿ, ಪಲ್ಲಕಿ ಉತ್ಸವ, ರಾತ್ರಿ ರಂಗಪೂಜೆ, ಬಲಿ, ಪಲ್ಲಕಿ ಉತ್ಸವ ಜರುಗಿತು.ದೇವಸ್ಥಾನದ ಪ್ರಧಾನ ಅರ್ಚಕ ದತ್ತಾತ್ರೇಯ ಭಟ್ ಮತ್ತಿತರ ಅರ್ಚಕರ ತಂಡ ಪೂಜಾ ವಿಧಿ ವಿಧಾನ ನೆರವೇರಿಸಿಕೊಟ್ಟರು. ಬ್ರಹ್ಮಕಲಶೋತ್ಸವಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ, ಚಂದುಕುಂದು ವಿಶ್ವನಾಥ ಹೆಗ್ಡೆ, ನಂದಕುಮಾರ್ ಹೆಗ್ಡೆ, ಯಶೋದಾ ಹೆಗ್ಡೆ, ಸಮಿತಿ ಅಧ್ಯಕ್ಷ ಉದಯ ಹೆಗ್ಡೆ, ಕಾರ್ಯದರ್ಶಿ ಶೇಖರ್ ಹೆಗ್ಡೆ, ದೇವಸ್ಥಾನದ ಆಡಳಿತ ಮೊಕ್ತೇಸರ ಶ್ಯಾಮ ಹೆಗ್ಡೆ, ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ನವೀನ್ ಹೆಗ್ಡೆ, ಕಾರ್ಯದರ್ಶಿ ಪ್ರನೀಲ್ ಹೆಗ್ಡೆ, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ವಿನೋದಾ ಹೆಗ್ಡೆ, ಕಾರ್ಯದರ್ಶಿ ಅಶ್ವಿನಿ ಎನ್. ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ವೀರಮಣಿ ಕಾಳಗ; ಯಕ್ಷಗಾನ ತಾಳಮದ್ದಳೆ ನಡೆಯಿತು. ಸಂಜೆ ದುರ್ಗಾ ಮಕ್ಕಳ ಯಕ್ಷಗಾನ ಮಂಡಳಿ ಕಟೀಲು ಇಲ್ಲಿನ ಮಕ್ಕಳಿಂದ ‘ಶಕ್ರಾರಿ’ ಯಕ್ಷಗಾನ ಪ್ರದರ್ಶನಗೊಂಡಿತು.