ಶಕುಂತಲಾ ಭಂಗಿ ಕೊಟಬಾಗಿ ಗ್ರಾ.ಪಂ. ಅಧ್ಯಕ್ಷೆ

5 Dwd 6
Published on

ಧಾರವಾಡ: ತಾಲೂಕಿನ ಕೊಟಬಾಗಿ ಗ್ರಾಮ ಪಂಚಾಯಿತಿಯ ಮುಂದಿನ ಎರಡೂವರೆ ವರ್ಷದ ಅವಽಗೆ ನೂತನ ಅಧ್ಯಕ್ಷರಾಗಿ ಶಕುಂತಲಾ ರುದ್ರಪ್ಪ ಭಂಗಿ ಹಾಗೂ ಉಪಾಧ್ಯಕ್ಷರಾಗಿ ಮಡಿವಾಳಪ್ಪ ಮಜ್ಜಗಿ ಅವಿರೋಧವಾಗಿ ಆಯ್ಕೆಯÁಗಿದ್ದಾರೆ.
ಕೊಟಬಾಗಿ ಗ್ರಾ.ಪಂ. ಕಚೇರಿಯಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಕುಂತಲಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಡಿವಾಳಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದ ಅವಿರೋಧ ಆಯ್ಕೆ ಎಂದು ಘೋಷಿಸಲಾಯಿತು.
ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರನ್ನು ಪಿಡಿಒ ಸುನಂದಾ ಕಮತಗಿ, ಸದಸ್ಯರು ಹಾಗೂ ಗ್ರಾಮದ ಮುಖಂಡರು ಸನ್ಮಾನಿಸಿದರು. ಶಾಸಕ ವಿನಯ ಕುಲಕರ್ಣಿ ಆಪ್ತ ಕಾರ್ಯದರ್ಶಿ ಪ್ರಶಾಂತ ಕೇಕರೆ, ಕಾಂಗ್ರೆಸ್ ಮುಖಂಡರಾದ ವಿಜಯ ಕುರಕುರಿ, ಅಶೋಕರಾವ್ ಮೊಖಾಶಿ, ರುದ್ರಪ್ಪ ಕಟ್ಟೇಕಾರ, ದೇವೇಂದ್ರ ಜಿನ್ನಪ್ಪನವರ, ಮಡಿವಾಳಪ್ಪ ಚಿಟ್ಟಿ, ಬಸವರಾಜ ಪಾಗಾದ, ಕಲ್ಲನಗೌಡ ಪಾಟೀಲ, ನಿಂಗನಗೌಡ ಪಾಟೀಲ, ಪಾರೀಶ ಲೋಬೊಗೋಳ, ಜಯಪಾಲ ಮಲ್ಲಾಡಿ, ಮಂಜುನಾಥ ತಿರ್ಲಾಪುರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net