ದೇವಳಗಳ ಶೇ.2 ಆದಾಯ ಗೋಶಾಲೆಗಳಿಗೆ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ

pejavara
Published on

ಉಡುಪಿ: ರಾಜ್ಯದ ಎ, ಬಿ ಗ್ರೇಡ್ ದೇವಸ್ಥಾನಗಳ ವಾರ್ಷಿಕ ಶೇ.2 ಆದಾಯವನ್ನು ಆಯಾ ಜಿಲ್ಲೆಗಳ ನೋಂದಾಯಿತ ಗೋಶಾಲೆಗಳಿಗೆ ನೆರವು ನೀಡಲು ಅನುವಾಗುವಂತೆ ಸಿಎಂ ಜತೆ ಸಮಾಲೋಚನೆ ನಡೆಸಿ ಇಲಾಖೆ ಮೂಲಕ ಸುತ್ತೋಲೆ ಹೊರಡಿಸಲಾಗುವುದು ಎಂದು ರಾಜ್ಯ ಹಿಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ನೀಲಾವರ ಗೋಶಾಲೆ ಆವರಣದ ಪೇಜಾವರ ಶಾಖಾ ಮಠಕ್ಕೆ ಭೇಟಿ ನೀಡಿ, ಚಾತುರ್ಮಾಸ್ಯ ವ್ರತದಲ್ಲಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಜತೆ ಗೋಶಾಲೆಗಳ ನಿರ್ವಹಣೆ ಕುರಿತು ಸಮಾಲೋಚನೆ ನಡೆಸಿ ಈ ತೀರ್ಮಾನ ಪ್ರಕಟಿಸಿದರು.

ಜಿಲ್ಲೆಗಳ ಗೋಮಾಳ ಭೂಮಿಯನ್ನು ಮೇವು ಬೆಳೆಸುವ ಉದ್ದೇಶಕ್ಕೆ ನೋಂದಾಯಿತ ಗೋಶಾಲೆಗಳಿಗೆ ನೀಡುವ ಕುರಿತು ನಿರ್ಧರಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net