ಕೋಟ ಸಂಘದ ಚುನಾವಣೆಯಲ್ಲಿ ಕೈ ಮೇಲುಗೈ

vote
Published on

ಕೋಟ: ಸಹಕಾರಿ ವ್ಯವಸಾಯಿಕ ಸಂಘದ ಐದು ವರ್ಷ ಅವಧಿಗೆ ನಡೆಯುವ ಚುನಾವಣೆ ಭಾನುವಾರ ಕೋಟ ವಿವೇಕ ವಿದ್ಯಾಸಂಸ್ಥೆಯಲ್ಲಿ ನಡೆಯಿತು.  13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಸಮಿತಿಯ ಸಹಕಾರಿ ಮಿತ್ರರು ಹಾಗೂ ಸಹಕಾರಿ ಭಾರತಿ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಮೂವರ ಅಭ್ಯರ್ಥಿಗಳು ಜಯ ಗಳಿಸಿದ್ದು, ಕಾಂಗ್ರೆಸ್ ಬೆಂಬಲಿತ ಸಹಕಾರಿ ಮಿತ್ರರು 10 ಸ್ಥಾನ ಗೆದ್ದರು.

ಸಹಕಾರಿ ಮಿತ್ರರು ಬಳಗದಿಂದ ಸಾಮಾನ್ಯ ಕ್ಷೇತ್ರದಿಂದ ಉದಯ್‌ಕುಮಾರ್ ಶೆಟ್ಟಿ, ಡಾ.ಕೃಷ್ಣ ಕಾಂಚನ್, ಚಂದ್ರ ಪೂಜಾರಿ, ಎಚ್.ನಾಗರಾಜ್ ಹಂದೆ, ರವೀಂದ್ರ ಕಾಮತ್, ಮಹಿಳಾ ಮಿಸಲಾತಿಯಿಂದ ವಸಂತಿ ಅಚ್ಯುತ ಪೂಜಾರಿ, ಹಿಂದುಳಿದ ವರ್ಗ ಎ ಯಿಂದ ಜಿ.ತಿಮ್ಮ ಪೂಜಾರಿ, ಹಿಂದುಳಿದ ವರ್ಗ ಬಿ ವಿಭಾಗದಿಂದ ಮಹೇಶ್ ಶೆಟ್ಟಿ, ಪರಿಶಿಷ್ಟ ಜಾತಿಯಿಂದ ಟಿ.ಮಂಜುನಾಥ್ ಗಿಳಿಯಾರು, ಪರಿಶಿಷ್ಟ ಪಂಗಡದಿಂದ ರಶ್ಮಿತಾ, ಸಹಕಾರ ಭಾರತಿಯಿಂದ ಸಾಮಾನ್ಯ ಕ್ಷೇತ್ರದಿಂದ ಅಜಿತ್ ದೇವಾಡಿಗ, ರಂಜಿತ್ ಕುಮಾರ್, ಮಹಿಳಾ ಮಿಸಲು ಕ್ಷೇತ್ರದಿಂದ ಉಮಾ ಗಾಣಿಗ ಜಯಶಾಲಿಗಳಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಬೆಂಬಲಿತ ಸಹಕಾರಿ ಮಿತ್ರರು ಗೆಲುವಿನ ನಾಗಾಲೋಟ ಮುಂದುವರಿಸಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೋಟತಟ್ಟು 21ರ ಬೂತ್‌ನಲ್ಲಿ ಮತದಾನಗೈದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net