ದೇವಸ್ಥಾನದ ಬಾವಿಗೆ‌ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ: ತೆಕ್ಕಟ್ಟೆ ಬೆನ್ನಲ್ಲೇ ಅದೇ ರೀತಿಯ ಮತ್ತೊಂದು ದುರಂತ

Kota Man
Published on

ಕೋಟ: ಕೋಟತಟ್ಟು ಪಡುಕರೆ ನಿವಾಸಿ ಚೆನೈಯ್ಯ ಪೂಜಾರಿ (51) ಎಂಬಾತ ಮನೆಯ ಸಮೀಪವಿರುವ ಶಿರಸಿ ಮಾರಿಕಾಂಬ ಅಮ್ಮನವರ ದೇವಳದ ಬಾವಿಯೊಳಗೆ ಬಾವಿಯ ಹಗ್ಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಪಡುಕರೆಯ ಸಮುದ್ರ ಕಿನಾರೆಯಲ್ಲಿ ಬೀಡಾ ಅಂಗಡಿ ಇರಿಸಿಕೊಂಡು ಜೀವನಸಾಗಿಸುತ್ತಿದ್ದ ಇತ ಬುಧವಾರ ಮುಂಜಾನೆ ಬಾವಿಯ ಹಗ್ಗಕ್ಕೆ ಶರಣಾಗಿದ್ದಾನೆ.ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ .ಕೋಟ ಪೊಲಿಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

ದೇವಳದ ವ್ಯಾಪ್ತಿಯಲ್ಲಿ ಎರಡನೆ ಪ್ರಕರಣ
ಒಂದೇ ವಾರದಲ್ಲಿ ಎರಡು ಪ್ರಕರಣ ಕೋಟ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಳದಲ್ಲಿ ಚಂದ್ರ ಪೂಜಾರಿ ಎನ್ನುವಾತ ಆತ್ಮಹತ್ಯೆ ಮಾಡಿ ಕೊಂಡದ್ದು ಪಡುಕರೆ ಘಟನೆ ಎರಡನೆಯದ್ದಾಗಿದೆ. ಈ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು ದೇವಳದ ಶ್ರದ್ಧಾ ಭಕ್ತಿಗೆ ಕುಂದುತರುವ ಪ್ರಕರಣವಾಗಿದೆ . ಎಂಬ ಮಾತುಗಳು ಕೇಳಿಬರುತ್ತಿವೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net