ಕಾರಂತರ ಕಾರು ಅನಾವರಣ

kota car
Published on

ಕೋಟ: ಸಾಲಿಗ್ರಾಮದ ಡಾ.ಕೋಟ ಶಿವರಾಮ ಕಾರಂತ ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆ ಮಾನಸ ಸಾಲಿಗ್ರಾಮ ರಂಗರಥದಲ್ಲಿ ಶನಿವಾರ ಡಾ.ಕೋಟ ಶಿವರಾಮ ಕಾರಂತರ 118 ನೇ ಜನ್ಮದಿನಾಚರಣೆ ಸಂದರ್ಭ ಡಾ.ಕಾರಂತರು ಬಳಸಿದ್ದ ಕಾರಿನ ಅನಾವರಣಗೊಳಿಸಲಾಯಿತು.

ಕಾರಂತರು 1992ರಲ್ಲಿ ಅಂಬಾಸಿಡರ್ ನೋವಾ ಕಾರನ್ನು ಖರೀದಿಸಿದ್ದರು. 6 ವರ್ಷ ಇದರಲ್ಲೇ ಅವರು ಓಡಾಡಿದ್ದು, ಸದ್ಯ ಅದೇ ಕಾರನ್ನು ಸುಮಾರು 1.25 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮಾಡಿಸಲಾಗಿದೆ ಎಂದು ಅಧ್ಯಯನ ಸಂಸ್ಥೆಯ ಮಾಲಿನಿ ಮಲ್ಯ ತಿಳಿಸಿದರು.

ಥೀಂ ಪಾರ್ಕ್‌ನ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net