ಕೋಟ ಸಿಎ ಬ್ಯಾಂಕ್‌ಗೆ 5.83 ಕೋಟಿ ರೂ. ನಿವ್ವಳ ಲಾಭ

kota (2)
Published on

ವಿಜಯವಾಣಿ ಸುದ್ದಿಜಾಲ ಕೋಟ ಕೋಟ ಸಹಕಾರಿ ವ್ಯವಸಾಯಕ ಸಂಘದ 68ನೇ ವಾರ್ಷಿಕ ಸರ್ವ ಸದಸ್ಯರ ಸಾವಾನ್ಯ ಸಭೆ ವಿವೇಕ ಪದವಿ ಪೂರ್ವ ಕಾಲೇಜಿನ ಮಹಾತ್ಮಾ ಗಾಂಧಿ ಸಭಾಭವನದಲ್ಲಿ ಸಂದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಅಧ್ಯಕ್ಷತೆಯಲ್ಲಿ ಜರುಗಿತು. 2024-25ನೇ ಸಾಲಿನ ವರದಿ ಮಂಡಿಸಿದ ಅಧ್ಯಕ್ಷ ಕೃಷ್ಣ ಕಾಂಚನ್, ಪ್ರಸಕ್ತ ಸಾಲಿನಲ್ಲಿ 268.23 ಕೋಟಿ ರೂ. ಠೇವಣಿ, 213.02 ಕೋಟಿ ರೂ. ಸಾಲ ಹೊರಬಾಕಿಯಿದೆ. 1,326 ಕೋಟಿ ರೂ. ವ್ಯವಹಾರ ವಾಡಿ 5.83 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಸಂದ ಸದಸ್ಯರಿಗೆ ಶೇ.16 ಲಾಂಭಾಶ ೋಷಿಸಿರುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರ, ಅಡಕೆ ಗಿಡಗಳ ನರ್ಸರಿ, ಸಕಲ ಕೃಷಿ ಉಪಕರಣ, ಗಹೋಪಯೋಗಿ ವಸ್ತುಗಳ ವಾರಾಟ ಮಳಿಗೆಯನ್ನು ಕೋಟ ಗೀತಾನಂದ ೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಉದ್ಘಾಟಿಸಿದರು. ನೇತ್ರ ಉಚಿತ ತಪಾಸಣೆ, ಪೊರೆ ಶಸಚಿಕಿತ್ಸಾ ಶಿಬಿರವನ್ನು ಪ್ರಗತಿಪರ ಕೃಷಿಕ ರಾವೇಂದ್ರ ಮಧ್ಯಸ್ಥ ಉದ್ಘಾಟಿಸಿದರು. ಉಚಿತ ಇ.ಸಿ.ಜಿ. ತಪಾಸಣಾ ಶಿಬಿರವನ್ನು ಗೆಳೆಯರ ಬಳಗ ಕಾರ್ಕಡ ಸಾಲಿಗ್ರಾಮ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಉದ್ಘಾಟಿಸಿದರು. ಸಂದಲ್ಲಿ ಅತ್ಯುತ್ತಮ ವ್ಯವಹಾರ ನಡೆಸಿದ ಶಾಖೆಗಳನ್ನು ೋಷಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಪುರಸ್ಕರಿಸಲಾಯಿತು. ಅಂಗವಿಕಲ ದತ್ತಿನಿಧಿ, ಕೃಷಿ ಆವರ್ತನಾ ನಿಧಿ ವಿತರಿಸಲಾಯಿತು. ಸಂದ ಉಪಾಧ್ಯಕ್ಷ ಎಚ್.ನಾಗರಾಜ ಹಂದೆ, ನಿರ್ದೇಶಕರಾದ ಜಿ.ತಿಮ್ಮ ಪೂಜಾರಿ, ಕೆ.ಉದಯಕುವಾರ್ ಶೆಟ್ಟಿ, ರವೀಂದ್ರ ಕಾಮತ್, ಮಹೇಶ ಶೆಟ್ಟಿ, ರಶ್ಮಿತಾ, ರಂಜಿತ್ ಕುವಾರ್, ಚಂದ್ರ ಪೂಜಾರಿ ಪಿ., ವಸಂತಿ ಪೂಜಾರಿ, ಜಿ.ಅಜಿತ್ ದೇವಾಡಿಗ, ಪ್ರೇವಾ ದಿನಕರ ಶೆಟ್ಟಿ, ಪಿ.ಶೇಖರ ಮರಕಾಲ ಮೊದಲಾದವರು ಉಪಸ್ಥಿತರಿದ್ದರು. ಸಂದ ನಿರ್ದೇಶಕ ಟಿ.ಮಂಜುನಾಥ ಗಿಳಿಯಾರು ಸ್ವಾಗತಿಸಿದರು. ನಿಶಾ ಆರ್.ಪೂಜಾರಿ ಪ್ರಾರ್ಥಿಸಿದರು. ಸಿಬ್ಬಂದಿ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್‌ಕುವಾರ್ ಶೆಟ್ಟಿ ವಂದಿಸಿದರು.

ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿವಾನಂದ ನಾರಿ, ಡಾ.ಕೆ.ಉಮೇಶ ಶೆಟ್ಟಿ, ಡಾ.ಸುರೇಶ ಖಾರ್ವಿ, ಮಧುರಾ, ಅನಿರುದ್ಧ್, ನಿಧಿ ಪೈ ಎಂ., ಲಕ್ಷ್ಮೀ, ಪ್ರೇವಾ, ಭೋಜ ಪೂಜಾರಿ, ಸಂದಲ್ಲಿ ಸುದೀರ್ ಸೇವೆ ಸಲ್ಲಿಸಿ ನಿವೃತ್ತರಾದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೆ.ರಾಧಾ, ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net