ಕೋಟ ಅಮೃತೇಶ್ವರಿ ಮೇಳ ತಿರುಗಾಟ ಪ್ರಾರಂಭ

dashavarhatara new
Published on

ಕೋಟ: ಶ್ರೀ ಕ್ಷೇತ್ರ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದ ವತಿಯಿಂದ ನಡೆಸಲ್ಪಡುವ ದಶಾವತಾರ ಯಕ್ಷಗಾನ ಮಂಡಳಿ ಈ ವರ್ಷದ ತಿರುಗಾಟ ಶುಕ್ರವಾರ ಪ್ರಾರಂಭಗೊಂಡಿತು.

ಶ್ರೀ ಕ್ಷೇತ್ರದಲ್ಲಿ ಶುಕ್ರವಾರ ಗಣಹೋಮ, ಇನ್ನಿತರ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚೌಕಿ ಪೂಜೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ.ಕುಂದರ್ ಮಾತನಾಡಿ, ದೇವಳದ ವತಿಯಿಂದ ನಡೆಸಲ್ಪಡುವ ಯಕ್ಷಗಾನ ಕಾರ್ಯಕ್ರಮ ಹರಕೆಯ ರೂಪದಲ್ಲಿ ದೇವಿಗೆ ಸಲ್ಲುತ್ತದೆ. ದೇವರ ಈ ಸೇವೆ ಕರೊನಾ ಕಾಲಘಟ್ಟದಲ್ಲಿ ಸರ್ಕಾರದ ನಿಯಮದಂತೆ ಕಾರ್ಯಗತಗೊಳಿಸಬೇಕಿದೆ. ಭಕ್ತರು ದೇವಳದ ಕೌಂಟರ್‌ನಲ್ಲಿ ಸೇವೆಯಾಟಕ್ಕೆ ನಮೂದಿಸಬಹುದು ಎಂದರು.

ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎಂ. ಸುಬ್ರಾಯ ಆಚಾರ್ಯ, ರಾಮದೇವ ಐತಾಳ್, ಸುಬ್ರಾಯ ಜೋಗಿ, ಅರ್ಚಕರಾದ ರಮಾನಾಥ ಜೋಗಿ, ಮೇಳದ ಮ್ಯಾನೇಜರ್ ಸುರೇಶ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು. ಧಾರ್ಮಿಕ ಪೂಜಾ ಕಾರ್ಯವನ್ನು ಅನಂತೇಶ್ವರ ಭಟ್ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net