ಹುಬ್ಬಳ್ಳಿಯಲ್ಲೂ ಮಾರಕ ವೈರಸ್​ ಕೊರೊನಾ ಭೀತಿ; ಚೀನಾದಿಂದ ಮರಳಿದ ವ್ಯಕ್ತಿ ಕಿಮ್ಸ್​ಗೆ ದಾಖಲು

KIMS 11 (4)
Published on

ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ತೀವ್ರ ಎಚ್ಚರಿಕೆ ವಹಿಸಲಾಗಿದೆ ಎಂದು ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ದಿಗ್ವಿಜಯ ನ್ಯೂಸ್​ಗೆ ತಿಳಿಸಿದ್ದಾರೆ.

ಸಂದೀಪ್ ತೇಳಸಂಗದ್ ಎಂಬುವವರು ಕಿಮ್ಸ್​ಗೆ ದಾಖಲಾಗಿದ್ದಾರೆ. ಜ್ವರ, ಕಫಾ ಸಮಸ್ಯೆಯಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಸಂದೀಪ್​ ಚೀನಾದಿಂದ ಹಿಂದಿರುಗಿರುವ ಹಿನ್ನೆಲೆಯಲ್ಲಿ ವಿವಿಧ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜ.14ರಂದು ಚೀನಾದಿಂದ ಮುಂಬೈಗೆ ಸಂದೀಪ್ ಬಂದಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಅನುಮಾನ ಬಂದು ನಮ್ಮಲ್ಲಿ ದಾಖಲಾಗಿದ್ದಾರೆ. ನಾವು ಕೂಡಾ ತಪಾಸಣೆ ನಡೆಸಿ ತೀವ್ರ ನಿಗಾ ವಹಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಆತನ ರಕ್ತದ ಸ್ಯಾಂಪಲ್​ನ್ನು ಬೆಂಗಳೂರು ಮತ್ತು ಪುಣೆಗೆ ಕಳುಹಿಸಿದ್ದೇವೆ. ಸಂದೀಪ್​ ಅವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಲ್ಲ. ಶೇ.99 ಆತ ಚೆನ್ನಾಗಿದ್ದಾರೆ‌. ಆದರೆ ಮುಂಜಾಗ್ರತಾ ಕ್ರಮವಾಗಿ ನಾವು ಎಚ್ಚರ ವಹಿಸಿದ್ದೇವೆ. ಅಲ್ಲದೆ ನಮ್ಮ ಸಿಬ್ಬಂದಿಗೂ ಈ ಬಗ್ಗೆ ಸೂಚನೆ‌ ನೀಡಿದ್ದೇವೆ. ನಾಳೆ ರಕ್ತ ಪರೀಕ್ಷೆಯ ವರದಿ ಬರಲಿದೆ. ನಂತರ ಡಿಸ್ಚಾರ್ಜ್ ಮಾಡಲಾಗುವುದು ಎಂದರು.

ಕೊರೊನಾ ವೈರಸ್​ ಶಂಕಿತ ಸಂದೀಪ್​ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪುಣೆ ಮತ್ತು ಬೆಂಗಳೂರಿಗೆ ಅವರ ರಕ್ತದ ಮಾದರಿ ಪರೀಕ್ಷೆಗೆ ರವಾನಿಸಲಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ಸಿ, ಅರುಣಕುಮಾರ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net