VIDEO: ಕುಡುಕರಿಗೆ ಸಿಹಿ ಸುದ್ದಿ; ಆಯುಕ್ತರ ಸೂಚನೆಯಂತೆ ಕೊರೊನಾ ಭೀತಿಯಿಂದ ಡ್ರಂಕ್​ ಆ್ಯಂಡ್​ ಡ್ರೈವ್​ ಪರೀಕ್ಷೆ ನಿಲ್ಲಿಸಿದ ಪೊಲೀಸರು

TRAFFIC POLICE
Published on

ಬೆಂಗಳೂರು: ಕೊರೊನಾ ವೈರಸ್​ನಿಂದ ಜಗತ್ತೇ ತಲ್ಲಣಗೊಂಡಿದೆ. ಆದರೆ ಕುಡುಕರಿಗೆ ಮಾತ್ರ ಇದು ಸಿಹಿ ಸುದ್ದಿ ತಂದಿದೆ.

ಏನಪ್ಪಾ ಅಂದ್ರೆ ಬೆಂಗಳೂರಿನಲ್ಲಿ ರಾತ್ರಿ ಡ್ರಂಕ್​ ಆ್ಯಂಡ್​ ಡ್ರೈವ್​ ಪರೀಕ್ಷೆಯನ್ನು ಮಾಡುವುದು ಬೇಡ ಎಂದು ಪೊಲೀಸರು ನಿರ್ಧರಿಸಿದ್ದಾರೆ.

ಈ ಬಗ್ಗೆ ಜಂಟಿ ಆಯುಕ್ತರು ಪೊಲೀಸರಿಗೆ ಸೂಚನೆ ಕೊಟ್ಟಿದ್ದು, ಕುಡಿದು ವಾಹನ ಚಲಾಯಿಸುವವರ ಪರೀಕ್ಷೆ ಬೇಡ ಎಂದಿದ್ದಾರೆ. ಉಸಿರಿಗೆ ಉಸಿರು ತಾಗಿ ಪೊಲೀಸರಲ್ಲೂ ಮಾರಕ ವೈರಸ್​ ಕೊರೊನಾ ಹರಡೀತು ಎಂಬ ಭಯದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಮಾರಕ ವೈರಸ್​ಗೆ ಎಲ್ಲೆಡೆ ಭೀತಿ ಆವರಿಸಿದ್ದರೆ ಬೆಂಗಳೂರಿನ ಕುಡುಕರಿಗೆ ಮಾತ್ರ ನೆಮ್ಮದಿ ತಂದಿದೆ. ಇನ್ನು ಕೆಲ ದಿನ ಡ್ರಂಕ್​ ಆ್ಯಂಡ್​ ಡ್ರೈವ್​ ಪರೀಕ್ಷೆ ಬೇಡ ಎಂದು ಜಂಟಿ ಪೊಲೀಸ್​ ಆಯುಕ್ತ ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net